ಕನಕಪುರ: ಕರ್ನಾಟಕದಲ್ಲಿ ತಿಪ್ಪರಲಾಗ ಹಾಕಿದ್ರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂಬುದಾಗಿ ಕನಕಪುರ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಹೇಳಿದ್ದಾರೆ.
ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ.
ಹೆಚ್ಚು ಕಡಿಮೆಯಾದರೇ ನಮ್ಮ ಕೇಂದ್ರ ನಾಯಕರು ಇದ್ದಾರೆ ಎಂದರು.
ಸರ್ಕಾರ ರನಚೆಗೆ ಏನು ಕಸರತ್ತು ಮಾಡಬೇಕೋ ಮಾಡುತ್ತೇವೆ. ಅತಿ ದೊಡ್ಡ ಪಕ್ಷಾಗಿ ಬಂದರೆ ಸರ್ಕಾರ ರಚನೆ ಮಾಡುತ್ತೇವೆ ಎಂದರು.
ಈ ಬಾರಿ ಆಪರೇಷನ್ ಕಮಲ ನಡೆಯುತ್ತಾ ಎಂಬುದಾಗಿ ಕೇಳಿದಂತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ನಾವು ಚುನಾವಣಾ ತಂತ್ರಗಾರಿಕೆ ಮಾಡಿಯೇ ಮಾಡುತ್ತೇವೆ. ಕೇಂದ್ರ ನಾಯಕರ ಸೂಚನೆಯನ್ನು ಪಾಲನೆ ಮಾಡುತ್ತೇವೆ. ನಾವು ಮಾಡಿದರೆ ಮಾತ್ರವೇ ಆಪರೇಷನ್ ಕಮಲವೆ? ಕಾಂಗ್ರೆಸ್, ಜೆಡಿಎಸ್ ಮಾಡಿದರೆ ಏನು ಎಂದು ಎಂಬುದಾಗಿ ಪ್ರಶ್ನಿಸಿದರು.