ಗುತ್ತಿಗೆದಾರರಿಗೆ ಕಾಂಗ್ರೆಸ್ನವರು ಬೆದರಿಕೆ ಹಾಕಿರಬಹುದು: ಎನ್.ರವಿಕುಮಾರ್

ಬೆಂಗಳೂರು ;- ಗುತ್ತಿಗೆದಾರರಿಗೆ ಕಾಂಗ್ರೆಸ್ನವರು ಬೆದರಿಕೆ ಹಾಕಿರಬಹುದು ಎಂದು ಬಿಜೆಪಿ ಮುಖಂಡ ಎನ್.ರವಿಕುಮಾರ್ ಹೇಳಿದ್ದಾರೆ.ಈ ಸಂಬಂಧ ಮಾತನಾಡಿದ ಅವರು,ಬಿಬಿಎಂಪಿ ಗುತ್ತಿಗೆದಾರರು 15% ಕಮಿಷನ್ ಆರೋಪ ಮಾಡಿದ್ದು ರಾಜ್ಯಪಾಲರು, ಬೊಮ್ಮಾಯಿ, ಯಡಿಯೂರಪ್ಪ ಮತ್ತು ನಮ್ಮ ಮಾಜಿ ಮಂತ್ರಿಗಳ ಬಳಿ ಹೋಗಿ ಮನವಿ ಪತ್ರ ಕೊಟ್ಟಿದ್ದರು.
ಈಗ ಗುತ್ತಿಗೆದಾರರು ಯೂ ಟರ್ನ್ ಹೊಡೆದಿದ್ದಾರೆ. ಯಾರು ನಂಬುತ್ತಾರೆ. ಗುತ್ತಿಗೆದಾರರಿಗೆ ಕಾಂಗ್ರೆಸ್ನವರು ಬೆದರಿಕೆ ಹಾಕಿರಬೇಕು. ಅದಕ್ಕಾಗಿ ಗುತ್ತಿಗೆದಾರ ಹೇಮಂತ್ ಯೂ ಟರ್ನ್ ಹೊಡೆದಿದ್ದಾರೆ. ಇದು ಕಾಂಗ್ರೆಸ್ನ ಬ್ಲಾಕ್ಮೇಲ್ ತಂತ್ರ. ಈ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸ್ವಾತಂತ್ರ್ಯ ಧ್ವಜಾರೋಹಣದ ನಂತರ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲಿದ್ದೇವೆ ಎಂದರು.
ಈ ಸರ್ಕಾರ ಭ್ರಷ್ಟಾಚಾರದ ಸರ್ಕಾರ. ಚಲುವರಾಯಸ್ವಾಮಿ ಲಂಚ ಕೇಳಿರೋದು ಸುಳ್ಳಾ?. ಗುತ್ತಿಗೆದಾರರ ಆರೋಪ ಸುಳ್ಳಾ? ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ಶೇ. 15ರಷ್ಟು ಕಮಿಷನ್ ಕೇಳಿಲ್ಲ ಎಂದು ಈಗ ಹೇಳಿದರೆ ಯಾರು ಒಪ್ಪತ್ತಾರೆ?. ಇದು ಬ್ಲಾಕ್ಮೇಲ್ ತಂತ್ರವಲ್ಲದೇ ಮತ್ತೇನಲ್ಲ. ಈ ಸರ್ಕಾರ ಭ್ರಷ್ಟ ಸರ್ಕಾರ. ಕಮಿಷನ್ ಸರ್ಕಾರ. ಈ ಸರ್ಕಾರ ಮುಂದುವರೆದಷ್ಟು ರಾಜ್ಯಕ್ಕೆ ಅಪಾಯ. ಇವರಿಂದ ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಇದು ಹಣ ಮಾಡಿಕೊಳ್ಳಲು ಬಂದಿರುವ ಸರ್ಕಾರ. ಇಷ್ಟು ವರ್ಷಗಳ ಕಾಲ ಅಧಿಕಾರದಿಂದ ದೂರವಿದ್ದು, ಹಸಿದ ಹುಲಿಗಳಾಗಿದ್ದಾರೆ. ಅನೇಕರು ಹಣ ಮಾಡಲು ನಿಂತಿದ್ದಾರೆ. ಹಾಗಾಗಿ, ಈ ಸರ್ಕಾರ ಮುಂದುವರೆದಷ್ಟು ರಾಜ್ಯಕ್ಕೆ ಬಹಳ ಅನ್ಯಾಯವಾಗಲಿದೆ. ಜೀರೋ ಟಾಲರೆನ್ಸ್ ಭ್ರಷ್ಟಾಚಾರದ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದರಲ್ಲ. ಈಗ ಏನು ಕ್ರಮ ಕೈಗೊಳ್ಳುತ್ತೀರಿ ರಾಹುಲ್ ಗಾಂಧಿಯವರೇ ಎಂದು ಪ್ರಶ್ನಿಸಿದರು.

Loading

Leave a Reply

Your email address will not be published. Required fields are marked *