ಶಿವಮೊಗ್ಗ: ಅಧಿಕಾರದ ಆಸೆಗಾಗಿ ಕಾಂಗ್ರೆಸ್ನವರು ದೇಶವನ್ನು ತುಂಡು ಮಾಡಿದರು ಎಂದು ಶಿವಮೊಗ್ಗದಲ್ಲಿ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು. ಅಧಿಕಾರದ ಆಸೆಗೆ ದೇಶವನ್ನು ಭಾರತ, ಪಾಕ್ ಎಂದು ಇಬ್ಭಾಗ ಮಾಡಿದರು. ಈ ವಿಚಾರ ಒಪ್ಪಿಕೊಂಡು ದೇಶದ ಜನರಲ್ಲಿ ಕಾಂಗ್ರೆಸ್ ಕ್ಷಮೆ ಕೇಳಬೇಕು.
ಭಯೋತ್ಪಾದನಾ ಚಟುವಟಿಕೆಗಳಿಗೆ ಕಾಂಗ್ರೆಸ್ನವರೇ ಕಾರಣ ಎಂದರು. ಮೋದಿ ಪಾಕಿಸ್ತಾನದ ಪ್ರಧಾನಿ ಆಗಲೆಂದು ಅಲ್ಲಿನ ಜನ ಈಗ ಹೇಳುತ್ತಿದ್ದಾರೆ. ಪಾಕ್ ಭಾರತಕ್ಕೆ ಸೇರುತ್ತೆ, ಅಖಂಡ ಭಾರತ ಆಗುವುದರಲ್ಲಿ ಅನುಮಾನವಿಲ್ಲ ಎಂದರು.