ಕಾಂಗ್ರೆಸ್​ನವರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದಾರೆ – ಬಿಸಿ ಪಾಟೀಲ್

ಹಾವೇರಿ;+ ಕಾಂಗ್ರೆಸ್​ನವರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದಾರೆ ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಗ್ಯಾರಂಟಿಯೂ ಇದೆ. ಇದು ಸರ್ಕಾರದ ಆರನೇ ಗ್ಯಾರಂಟಿ ಅನಿಸುತ್ತದೆ ಎಂದರು.

ಕಾಂಗ್ರೆಸ್​ನವರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದಾರೆ. ಕೃತ್ಯ ಆಗಿ ಇಷ್ಟು ದಿನ ಆದರೂ ಜಿಲ್ಲಾ ಉಸ್ತುವಾರಿ ಸಚಿವರು ಬಂದಿಲ್ಲ. ಇದು ದುರ್ದೈವದ ಸಂಗತಿ. ಆರೋಪಿಗಳನ್ನು ಭೇಟಿಯಾಗಲು ಮುಖಂಡರನ್ನು ಬಿಡುತ್ತಾರೆ ಅಂದರೆ ಪೊಲೀಸರು ಶಾಮೀಲಿದಾರೆ ಎಂದು ಕಿಡಿಕಾರಿದ್ದಾರೆ. ಯಾರು ಏನು ಮಾಡಿ, ಓಟ್ ಒಂದು ಕೊಟ್ಟು ಬಿಡಿ ಎನ್ನುವ ತರ ಕಾಂಗ್ರೆಸ್ ಸರ್ಕಾರದ ಸ್ಥಿತಿ ಇದೆ. ಎಲ್ಲಿ ಬೇಕಾದರೂ ಗಾಂಜಾ, ಸಾರಾಯಿ ಸಿಗುತ್ತಿದೆ. ಯುವಕರು ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ ಎಂದಿದ್ದಾರೆ.

ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಾಲ್ಕರ ಕ್ರಾಸ್ ಬಳಿ ಸುಮಾರು 7 ಜನ ಲಾಡ್ಜ್​ಗೆ ನುಗ್ಗಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದಾರೆ ಅಂತ ಆರೋಪ ಮಾಡಿದ್ದಾರೆ. ಗೂಂಡಾಗಿರಿ ಹತ್ತಿಕ್ಕುವುದಾಗಿ ಸಿಎಂ ಹೇಳುತ್ತಾರೆ. ಮುಸ್ಲಿಂ ಮಹಿಳೆ ಮೇಲೆ ಅತ್ಯಾಚಾರ ನಡೆದರೂ ಮುಚ್ಚಿ ಹಾಕುವ ಕೆಲಸ ಪೊಲೀಸರು ಮಾಡಿದಾರೆ. ಈ‌ ದುಷ್ಕೃತ್ಯಗಳಿಗೆ ಕಾಂಗ್ರೆಸ್ ಪಕ್ಷ ನಾಯಕರು ಸಪೋರ್ಟ್ ಮಾಡಿದಾರೆ. ಇನ್ನೂ ಮೂರು ಜನ ಆರೋಪಿಗಳನ್ನು ಅರೆಸ್ಟ್ ಮಾಡಿಲ್ಲ ಎಂದು ಹರಿಹಾಯ್ದಿದ್ದಾರೆ.

Loading

Leave a Reply

Your email address will not be published. Required fields are marked *