ಬೆಂಗಳೂರು: ಐಟಿ ದಾಳಿಯಲ್ಲಿ ಸಿಕ್ಕಿರುವ ಹಣಕ್ಕೂ ಕಾಂಗ್ರೆಸ್ ಗೂ ಸಂಬಂಧವಿಲ್ಲ. ಈ ವಿಚಾರವಾಗಿ ಬಿಜೆಪಿ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಐಟಿ, ಇ. ಡಿ ತನ್ನ ಜೇಬಿನಲ್ಲೇ ಇಟ್ಟುಕೊಂಡಿರುವ ಬಿಜೆಪಿ, ಯಾರ ಮೇಲಾದರೂ ಅನುಮಾನ ಇದ್ದರೆ ಪರಿಶೀಲನೆಗೆ ಕಳಿಸಿಕೊಡಲಿ, ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ ಎಂದರು. ಬಿಜೆಪಿಯವರಿಗೆ ಬೇರೆ ಯಾವ ಅಸ್ತ್ರವಿಲ್ಲ.
ಈ ರೀತಿಯ ಸುಳ್ಳುಗಳನ್ನ ಹೇಳಿ ಜನರ ದಾರಿ ತಪ್ಪಿಸುವುದೇ ಅವರಿಗೆ ಕೆಲಸವಾಗಿದೆ. ಐಟಿ ದಾಳಿಗೆ ಒಳಗಾದವರು ಯಾರು? ಅವರಿಗೂ ಕಾಂಗ್ರೆಸ್ ಗೂ ಏನು ಸಂಬಂಧ.? ಅವರೇನು ಕಾಂಗ್ರೆಸ್ ಕಾರ್ಯಕರ್ತಾರಾ ಅಥವಾ ಮುಖಂಡರಾ? ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಐಟಿ ಇ. ಡಿ ಯವರು ಆಕ್ವೀವ್ ಆಗಿರಲ್ಲ. ಬಿಜೆಪಿಯೇತರ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಐಟಿ ಅವರು ಆಕ್ವೀವ್ ಆಗ್ತಾರೆ ಎಂದು ವಾಗ್ದಾಳಿ ನಡೆಸಿದರು.