ಬೆಂಗಳೂರು: ಕಾಂಗ್ರೆಸ್ ರಾಮ ಮಂದಿರ ವಿರೋಧ ಮಾಡಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ವಿಕಾಸಸೌಧದಲ್ಲಿ ರಾಮ ಮಂದಿರ ಉದ್ಘಾಟನೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ರಾಮ ಮಂದಿರ ವಿರೋಧ ಮಾಡಿಲ್ಲ. ಶಂಕರಾಚಾರ್ಯರು ವಿರೋಧ ಮಾಡಿದ್ದು. ರಾಮನಿಗೆ ಸಾಧು ಸಂತರು ಜೀವ ತುಂಬಬೇಕು ಎಂದು ಅವರು ಹೇಳಿದ್ದರು. ಅಪೂರ್ವ ಮಂದಿರ ಉದ್ಘಾಟನೆ ಬೇಡ ಎಂದು ಶಂಕರಾಚಾರ್ಯರು ಹೇಳಿದ್ದಾರೆ.
ಸೋಮವಾರ ಪ್ರಧಾನಿಗಳು ಸುಪ್ರೀಂಕೋರ್ಟ್ ಆದೇಶದ ಮೇಲೆ ರಾಮ ಮಂದಿರ ಆಗಿದೆ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್ ಆದೇಶಕ್ಕೆ ನಾವು ವಿರೋಧ ಮಾಡಿಲ್ಲ. ನಮ್ಮ ಕಾರ್ಯಕರ್ತರು ಅವರ ಇಚ್ಛೆಯಂತೆ ಮಾಡಿ ಎಂದು ಹೈಕಮಾಂಡ್ ಹೇಳಿದೆ ಎಂದು ಸ್ಪಷ್ಟನೆ ನೀಡಿದರು. ಇನ್ನೂ ನನಗೆ ರಾಮನ ಬಗ್ಗೆ ಭಕ್ತಿ ಇಲ್ಲ. ಹೀಗಾಗಿ ರಾಮನನ್ನು ನೋಡಲು ಹೋಗಲ್ಲ. ರಾಮನನ್ನು ನೋಡಲು ಹೋಗಲ್ಲ. ಆದರೆ ಅಲ್ಲಿನ ಕಲೆ, ವಾಸ್ತುಶಿಲ್ಪ ನೋಡೊಕೆ ಮಾತ್ರ ಹೋಗುತ್ತೇನೆ ಎಂದರು.