ಬೆಂಗಳೂರು;- ದೇಶದ ಹೆಸರಿನಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ, ಈ ಸಂಬಂಧ ಮಾತನಾಡಿದ ಅವರು,ದೇಶವನ್ನು ಭಾರತ ಎಂದು ಕರೆಯುವುದು ನಮ್ಮ ಸಂವಿಧಾನದಲ್ಲೇ ಇದೆ. ಹೀಗಿರುವಾಗ ಬಿಜೆಪಿ ಈಗ ಏಕೆ ಈ ವಿಚಾರವನ್ನು ಚರ್ಚಿಸುತ್ತಿದೆ? ಇಂಡಿಯಾ ಈಸ್ ಭಾರತ್ ಎಂದು ದೇಶದ ಸಂವಿಧಾನದಲ್ಲೇ ಹೇಳಲಾಗಿದೆ. ದೇಶವನ್ನು ಭಾರತ ಎಂದು ಕರೆಯಲು ಕಾಂಗ್ರೆಸ್ ವಿರೋಧವಿಲ್ಲ.
ಇದು ಹೊಸ ವಿಚಾರವೂ ಅಲ್ಲ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಇಂತಹ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತೆ ಎಂದರು
ದೇಶದ ಹೆಸರಿನ ವಿಚಾರಗಳನ್ನು ಬಿಜೆಪಿ ತನ್ನ ಸ್ವಾರ್ಥ ರಾಜಕಾರಣಕ್ಕೆ ಬಳಸುವುದು ಸರಿಯಲ್ಲ. ದೇಶದ ಮುಂದೆ ಸಾವಿರಾರು ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಎಷ್ಟರ ಮಟ್ಟಿಗೆ ಕೇಂದ್ರ ಬಿಜೆಪಿ ಸರ್ಕಾರ ಪರಿಹರಿಸಿದೆ ಎಂದು ಚರ್ಚಿಸಲಿ. ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷಗಳಾಯ್ತು. ಇಂಡಿಯಾವನ್ನು ಭಾರತ ಅಂತ ಮರುನಾಮಕರಣ ಮಾಡಬೇಕು ಎಂಬುದರ ಬಗ್ಗೆ 9 ವರ್ಷಗಳಲ್ಲಿ ಒಂದು ಚಕಾರ ಎತ್ತಲಿಲ್ಲ. ಈಗ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಈ ವಿಚಾರವನ್ನ ಬಿಜೆಪಿ ಚರ್ಚಿಸುತ್ತಿದೆ ಎಂದು ಕಿಡಿ ಕಾರಿದರು.