ಬೆಳಗಾವಿ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಇದ್ದಾರೆ. ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ. ರಾಜ್ಯದಲ್ಲಿ ಸರಕಾರ ಸುಭದ್ರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆಯ ಪೂರ್ವದಲ್ಲಿ ನೀಡಿದ ಗ್ಯಾರಂಟಿ ಯೋಜನೆಯನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡಿದ್ದಾರೆ. ಇನ್ನೊಂದು ಗ್ಯಾರಂಟಿ ಜನವರಿಯಲ್ಲಿ ಯುವ ನಿಧಿ ಗ್ಯಾರಂಟಿ ಜಾರಿಗೆ ತರಲಾಗುವುದು ಎಂದರು.
ಮುಂದಿನ ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾವಣೆಯಾಗುವ ಯಾವ ಚರ್ಚೆಗಳು ನಡೆದಿಲ್ಲ. ಬಿಜೆಪಿಯವರಿಗೆ ಇಲ್ಲಿಯವರೆಗೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗದೆ ಇರುವುದು ವಿಪರ್ಯಾಸ ಎಂದರು.
ನಮ್ಮದ್ದು ಸಂವಿಧಾನಾತ್ಮಕವಾಗಿ ಕೆಲಸ ಮಾಡುವ ಪಕ್ಷ. ಬಿಜೆಪಿಯವರು ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ಸರಕಾರ ಪತನವಾಗುತ್ತದೆ ಎಂದು ಹೇಳುತ್ತಿದ್ದಾರೆ. ಅವತಂತೆ ನಾವು ಹೆದರಿಸುವುದು, ಬೇದರಿಸುವುದಿಲ್ಲ. ಬಿಜೆಪಿಯವರ ಕನಸ್ಸಿನ ಮಂಡಿಗೆ ಎಂದರು.
ಆಪರೇಶನ್ ಕಮನ ಎನ್ನುವ ರುಚಿ ಬಿಜೆಪಿಗೆ ಹಿಡಿದಿದೆ.
ಕಳೆದ ಕೆಲ ರಾಜ್ಯದಲ್ಲಿ ಮಾಡಿದ್ದಾರೆ. ಆದರೆ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಸುಭದ್ರವಾಗಿದೆ. ಬಿಜೆಪಿ, ಜೆಡಿಎಸ್ ನವರಿಗೆ ಕೆಲಸ ಇಲ್ಲ. ಬೇರೆವರ ಕೆರೆಯಲ್ಲಿ ಮೀನು ಹಿಡಿಯುವುದೇ ಅವರ ಕೆಲಸವಾಗಿದೆ ಎಂದು ಹರಿಹಾಯ್ದರು.ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರು ಸಮಾನ ವಯಸ್ಕರ ಶಾಸಕರ ಜೊತೆಗೆ ಪ್ರವಾಸಕ್ಕೆ ತೆರಳುವ ವಿಚಾರ ಕುರಿತು ನಾನು ಅವರಿಗೆ ಕೇಳಿಲ್ಲ. ಅದು ಅವರ ವೈಯಕ್ತಿಕ ವಿಚಾರ, ಅವರು ಯಾಕೆ ಹೋಗುತ್ತಿದ್ದರು ಎಂದು ನಾನು ವಿಚಾರಿಸಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.