ಬೆಂಗಳೂರು ;- ಆರ್.ಆರ್.ನಗರ ಶಾಸಕ ಮುನಿರತ್ನ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಯುವ ವಕೀಲ ಸುಭಾಷ್ ಎಂಬುವರಿಂದ ದೂರು ನೀಡಲಾಗಿದೆ.
ಬಿಜೆಪಿ ಶಾಸಕ ಮುನಿರತ್ನ ಅವರು, ಹನಿಟ್ರ್ಯಾಪ್ ಮಾಡಿಸಲು ಸ್ಟುಡಿಯೋ ಮಾಡಿದ್ದಾರೆ ಎಂದು ಮಾಜಿ ಕಾರ್ಪೋರೇಟರ್ ವೇಲುನಾಯ್ಕರ್ ಆರೋಪ ಮಾಡಿದ್ದರು.
ಹಾಗೂ ಜೆಪಿ ಪಾರ್ಕ್,ವಿದ್ಯಾರಣ್ಯಪುರಂನಲ್ಲಿ ಮಾಡಿದ್ದಾರೆಂದು ಆರೋಪ ಮಾಡಿದ್ದರು.
ಹೆಣ್ಣುಮಕ್ಕಳ ಸಹವಾಸ ಮಾಡಿಸಿ ಹನಿಟ್ರ್ಯಾಪ್ ಮಾಡಿಸ್ತಾರೆ. ತಮ್ಮ ಪರ ಕೆಲಸ ಮಾಡಿಸುವಂತೆ ಬೆದರಿಸ್ತಾರೆ ಎಂದು ವೇಲುನಾಯ್ಕರ್ ಬಹಿರಂಗ ಭಾಷಣ ಮಾಡಿದ್ದರು.
ಹೀಗಾಗಿ ವಕೀಲರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಸಾರ್ವಜನಿಕರ ಮುಂದೆ ಬಹಿರಂಗ ಭಾಷಣ ಮಾಡಿದ್ದಾರೆ. ವಿಷಯವನ್ನ ತಾವು ಗಂಭೀರವಾಗಿ ಪರಿಗಣಿಸಬೇಕು. ಹನಿಟ್ರ್ಯಾಪ್ ಆರೋಪದ ಬಗ್ಗೆ ತನಿಖೆ ಮಾಡಬೇಕು ಎಂದು ಪೊಲೀಸ್ ಆಯುಕ್ತರಿಗೆ ದೂರಿನ ಮೂಲಕ ಒತ್ತಾಯ ಮಾಡಿದ್ದಾರೆ.