ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಮಂಗಳವಾರ ಇಳಿಸಿವೆ. 19ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆ (99.75 ರೂಪಾಯಿ) ಅಂದಾಜು 100 ರೂಪಾಯಿ ಇಳಿಕೆಯಾಗಿದೆ.
ಎಲ್ಲೆಲ್ಲಿ ಎಷ್ಟು ರೂ. ಬೆಲೆ..?
ಕೋಲ್ಕತ್ತ 1,802.50 ರೂ, ಮುಂಬೈ 1,640.50 ರೂಪಾಯಿ ಇದ್ದರೆ ಇನ್ನು ಚೆನ್ನೈನಲ್ಲಿ 19 ಕೆಜಿಯ ಒಂದು ಸಿಲಿಂಡರ್ ಬೆಲೆ 1,852.50 ರೂಪಾಯಿ ಆಗಿದೆ. ಜುಲೈ 4 ರಂದು ಎಲ್ಪಿಸಿ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಪರಿಷ್ಕರಿಸಿದ್ದವು. ಪರಿಣಾಮ 19 ಕೆಜಿಯ ಸಿಲಿಂಡರ್ ಬೆಲೆ 1,780 (ದೆಹಲಿ), 1,895.50 (ಕೋಲ್ಕತ್ತ), 1,733.50 (ಮುಂಬೈ) ಹಾಗೂ ಚೆನ್ನೈನಲ್ಲಿ 1,945 ರೂಪಾಯಿ ಆಗಿತ್ತು.
ಸಾಮಾನ್ಯವಾಗಿ ಕಂಪನಿಗಳು ತಿಂಗಳದ ಮೊದಲನೇಯ ದಿನ ವಾಣಿಜ್ಯಕ್ಕೆ ಬಳಸುವ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಆದರೆ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಗೃಹ ಬಳಕೆಯ 14.2 ಕೆಜಿಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಮಾರ್ಚ್ 1 ರಂದು ತೈಲ ಕಂಪನಿಗಳು ಪರಿಷ್ಕರಣೆ ಮಾಡಿದ್ದವು.