ಬೆಂಗಳೂರು: ರಾಜ್ಯದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಕಾಮೆಡ್-ಕೆ ಪ್ಯಾನ್ ಇಂಡಿಯಾ ಸದಸ್ಯ ವಿವಿಗಳಲ್ಲಿನ ಆಡಳಿತ ಮಂಡಳಿ ಕೋಟಾ ಸೀಟುಗಳ ಪ್ರವೇಶಕ್ಕಾಗಿ, ಇಂದು ದೇಶಾದ್ಯಂತ ಕಾಮೆಡ್-ಕೆ ಪರೀಕ್ಷೆ ನಡೆಯಲಿದೆ.
ಮೇ.28ರ ಇಂದು ದೇಶಾದ್ಯಂತ ಕಾಮೆಡ್-ಕೆ ಯುಜಿಇಟಿ-2023 ಪರೀಕ್ಷೆ ನಡೆಯಲಿದೆ.
ದೇಶದ 180 ನಗರಗಳಲ್ಲಿ 264 ಕೇಂದ್ರಗಳಲ್ಲಿ ಕಾಮೆಡ್-ಕೆ ಪರೀಕ್ಷೆ ನಡೆಯಲಿದೆ.
ಈ ಬಾರಿ ಪರೀಕ್ಷೆಗೆ 90,607 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇಂತಹ ವಿದ್ಯಾರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಬರೆಯಲಿದ್ದಾರೆ.
ಇಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರಗೆ ಮೊದಲ ಹಂತದ ಪರೀಕ್ಷೆ ನಡೆದರೆ, ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ಎರಡನೇ ಹಂತದ ಪರೀಕ್ಷೆಗಳು ನಡೆಯಲಿವೆ.