ಆಸ್ಟ್ರೇಲಿಯಾಗೆ ಕೊಕೇನ್ ಕಳ್ಳಸಾಗಣೆ: ಭಾರತ ಮೂಲದ ದಂಪತಿಗೆ ಶಿಕ್ಷೆ

ಲಂಡನ್: ಆಸ್ಟ್ರೇಲಿಯಾಕ್ಕೆ (Australia) 600 ಕೋಟಿ ರೂ. ಮೌಲ್ಯದ ಕೊಕೇನ್ (Cocaine) ರಫ್ತು ಮಾಡಿದ ಆರೋಪದಲ್ಲಿ ಭಾರತೀಯ ಮೂಲದ ದಂಪತಿಗೆ ಯುಕೆನಲ್ಲಿ (U.K) ಶಿಕ್ಷೆ ವಿಧಿಸಲಾಗಿದೆ. ಅರ್ತಿ ಧೀರ್ (59) ಮತ್ತು ಕವಲ್ಜಿತ್ಸಿನ್ಹ್ ರೈಜಾಡಾ (35) ಶಿಕ್ಷೆಗೆ ಒಳಗಾದ ದಂಪತಿ. ಭಾರತ ಮೂಲದ (Indian Origin Couple)  ಈ ದಂಪತಿ 512 ಕಿಲೋ ಕೊಕೇನ್ ಅನ್ನು ಮೇ 2021 ರಲ್ಲಿ ಯುಕೆಯಿಂದ ಆಸ್ಟ್ರೇಲಿಯಾಕ್ಕೆ ವಾಣಿಜ್ಯ ವಿಮಾನದ ಮೂಲಕ ಕಳ್ಳಸಾಗಣಿಕೆ ಮಾಡಿದ ಪ್ರಕರಣದಲ್ಲಿ ಈಗ ಶಿಕ್ಷೆ ವಿಧಿಸಲಾಗಿದೆ.

ಸೌತ್‌ವಾಕ್ ಕ್ರೌನ್ ಕೋರ್ಟ್‌ನಲ್ಲಿ ಪ್ರಕರಣ ಸಂಬಂಧ ವಿಚಾರಣೆ ನಡೆಯಿತು. ಈಲಿಂಗ್‌ನಲ್ಲಿನ ಹ್ಯಾನ್‌ವೆಲ್‌ನಿಂದ ಬಂದ ದಂಪತಿಯ 12 ರಫ್ತು ಮತ್ತು ಅಕ್ರಮ ಹಣ ವರ್ಗಾವಣೆಯ 18 ಪ್ರಕರಣದ ಕೇಸ್ ಅದೇ ನ್ಯಾಯಾಲಯದಲ್ಲಿ ರಂದು ನಡೆಯಲಿದೆ.

ಆಸ್ಟ್ರೇಲಿಯಾನ್ ಬಾರ್ಡರ್ ಫೋರ್ಸ್ ಮಾಹಿತಿಯ ಪ್ರಕಾರ, ಯುಕೆ ಅಧಿಕಾರಿಗಳು ಧೀರ್ ಮತ್ತು ರೈಜಾದಾ, ಕೊಕೇನ್ ರವಾನೆಯನ್ನು ಪತ್ತೆಹಚ್ಚಿದ್ದಾರೆ. ಮಾದಕ ವಸ್ತುಗಳ ಕಳ್ಳಸಾಗಣೆಕೆ ಮಾಡುವ ಉದ್ದೇಶದಿಂದ ವಿಫ್ಲೈ ಸರಕು ಸೇವೆಗಳು ಎಂಬ ಕಂಪನಿಯನ್ನು ದಂಪತಿ ಸ್ಥಾಪಿಸಿದ್ದಾರೆ. ಈ ಹಿಂದೆ ಅವರು ಕೆಲಸ ಮಾಡಿದ ವಿಮಾನ ಸೇವೆ ಕಂಪನಿಯಲ್ಲಿ ಸರಕು ಸಾಗಣಿಯ ಬಗ್ಗೆ ಅವರು ತಿಳಿದುಕೊಂಡಿದ್ದರು.

ಧೀರ್ ಮಾರ್ಚ್ 2003 ರಿಂದ ಅಕ್ಟೋಬರ್ 2016 ರವರೆಗೆ ಅಲ್ಲಿ ಕೆಲಸ ಮಾಡಿದ್ದು, ರೈಜಾಡಾ ಮಾರ್ಚ್ 2014 ರಿಂದ ಡಿಸೆಂಬರ್ 2016 ರವರೆಗೆ ಅದೇ ಕಂಪನಿಯಲ್ಲಿ ಕೆಲಸ ಮಾಡಿದ್ದನು. ಈ ಜೋಡಿಯನ್ನು ಜೂನ್ 2021 ರಲ್ಲಿ ಮೊದಲು ಬಂಧಿಸಲಾಯಿತು. ಮನೆಯಿಂದ 52,68,180 ರೂ ಮೌಲ್ಯದ ಚಿನ್ನ ಲೇಪಿತ ಬೆಳ್ಳಿಯ ಬಾರ್‌ಗಳು, 13,69,475  ರೂ. ವಶಪಡಿಸಿಕೊಂಡಿದ್ದಾರೆ. ಸುರಕ್ಷತಾ ಠೇವಣಿ ಪೆಟ್ಟಿಗೆಯಲ್ಲಿ 63 ಲಕ್ಷ ರೂ. ನಗದು ಪತ್ತೆಯಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ 2023 ರಲ್ಲಿ ದಂಪತಿಯನ್ನು ಅಧಿಕಾರಿಗಳು ಮತ್ತೆ ಬಂಧಿಸಿದ್ದಾರೆ. ನಂತರ ರೈಜಾಡಾ ತನ್ನ ತಾಯಿಯ ಹೆಸರಿನಲ್ಲಿ ಬಾಡಿಗೆಗೆ ಪಡೆದಿದ್ದ ಹ್ಯಾನ್‌ವೆಲ್‌ನಲ್ಲಿರುವ ಶೇಖರಣಾ ಘಟಕದಲ್ಲಿದ್ದ ಪೆಟ್ಟಿಗೆ ಮತ್ತು ಸೂಟ್‌ಕೇಸ್‌ಗಳಲ್ಲಿ ಅಡಗಿಸಿಟ್ಟ ಸುಮಾರು 31.57 ಕೋಟಿ ರೂ.ಗಳ ಹಣವನ್ನು ಎನ್‌ಸಿಎ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ದಂಪತಿ 2019 ರಿಂದ ಸುಮಾರು 22 ವಿವಿಧ ಬ್ಯಾಂಕ್ ಖಾತೆಗಳಿಗೆ ಠೇವಣಿ ಮಾಡಿದ್ದಾರೆ.

2017 ರಲ್ಲಿ ವಿಮಾ ಪಾವತಿಗಾಗಿ ತಮ್ಮ 11 ವರ್ಷದ ದತ್ತು ಪುತ್ರ ಗೋಪಾಲ್ ಸೆಜಾನಿಯನ್ನು ಕೊಲೆ ಮಾಡಿರುವುದಾಗಿ ದಂಪತಿ ಮೇಲೆ ಭಾರತದಲ್ಲಿ ಆರೋಪವಿತ್ತು. ಈ ಜೋಡಿ 2015 ರಲ್ಲಿ ಗೋಪಾಲ್‌ನನ್ನು ದತ್ತು ತೆಗೆದುಕೊಳ್ಳಲು ಗುಜರಾತ್‌ಗೆ ಪ್ರಯಾಣ ಬೆಳೆಸಿದ್ದರು. ಜೊತೆಗೆ ಗೋಪಾಲ್‌ಗೆ ಲಂಡನ್‌ನಲ್ಲಿ ಉತ್ತಮ ಜೀವನ ನೀಡುವುದಾಗಿ ಭರವಸೆ ಸಹ ನೀಡಿದ್ದರು.

Loading

Leave a Reply

Your email address will not be published. Required fields are marked *