ಹಾವು ನುಂಗಿದ ನಾಗರಹಾವು- ಭಯಾನಕ ವಿಡಿಯೋ ವೈರಲ್

ಗದಗ;- ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ತನ್ನದೇ ತಳಿಯ ಹಾವನ್ನೇ ನಾಗರಹಾವು ನುಂಗಿದ ಘಟನೆ ಜರುಗಿದೆ. ಗ್ರಾಮದ ಅನ್ನದಾನೀಶ್ವರ ಪ್ರೌಢಶಾಲೆ ಆವರಣದಲ್ಲಿ ಈ ದೃಶ್ಯ ಕಂಡು ಬಂದಿದೆ. ತನ್ನದೇ ತಳಿಯ ನಾಗರಹಾವನ್ನ ಮತ್ತೊಂದು ನಾಗರಹಾವು ನುಂಗಿ ಹಾಕಿದೆ. ಹಸಿವು ತಾಳಲಾರದೇ ಈ ರೀತಿ ಒಂದನ್ನೊಂದು ಕೊಂದು ಸರ್ಪಗಳು ತಿಂದಿವೆ ಎಂದು ಉರಗತಜ್ಞರು ಮಾಹಿತಿ ನೀಡಿದ್ದಾರೆ. ಸದ್ಯ ಹಾವು ನುಂಗುವ ದೃಶ್ಯ ಸ್ಥಳಿಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

Loading

Leave a Reply

Your email address will not be published. Required fields are marked *