ಹುಬ್ಬಳ್ಳಿ: ಸಿಎಂ ಪುತ್ರ ಯತೀಂದ್ರ ವೀಡಿಯೋ ವೈರಲ್ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಾದ ಈ ರೀತಿ ಆರೋಪ ಸಹಜ. ಯಾವುದೇ ಭ್ರಷ್ಟಾಚಾರದ ಬಗ್ಗೆ ಸ್ಪಷ್ಟತೆ ಇಲ್ಲ. ಇದು ಕೇವಲ ಹಿಟ್ ಆ್ಯಂಡ್ ರನ್ ರೀತಿ ಆರೋಪಗಳು. ಯಾವುದೇ ಒಂದು ಭ್ರಷ್ಟಾಚಾರದ ಬಗ್ಗೆ ಆಧಾರ ಸಹಿತ ಆರೋಪ ಮಾಡುವ ಕೆಲಸಗಳಾಗುತ್ತಿಲ್ಲ.
40 ಕೋಟಿ ಹಣದ ಬಗ್ಗೆ ಬಿಜೆಪಿಯವರು ಆರೋಪ ಮಾಡಿದ್ದರು. ಅದರ ಬಗ್ಗೆ ಆಧಾರ ನೀಡಿ. ಕೇವಲ ಮಾದ್ಯಮಗಳಲ್ಲಿ ಬಿತ್ತರವಾಗುವ ಸುದ್ದಿಗಳಿಂದ ಆರೋಪ ಮಾಡುತ್ತಾರೆ. ಯತೀಂದ್ರ ಅವರ ವೀಡಿಯೋ ಪ್ರಕರಣದ ಬಗ್ಗೆ ಸುಖಾಸುಮ್ಮನೇ ಆರೋಪ ಮಾಡೋದು ಸರಿಯಲ್ಲ. ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಅನ್ನೋದು ಸ್ಷಷ್ಟವಾಗಿ ಆರೋಪ ಮಾಡಲಿ ಎಂದರು.