ವಿಜಯಪುರ: ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗದ ಬಗ್ಗೆ ಹೇಳಿಕೆ ವಿಚಾರ ಸಂಬಂಧ ವಿಜಯಪುರದಲ್ಲಿ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಮುಖ್ಯಮಂತ್ರಿಗಳಿಗಿಂತಲೂ ಹಿರಿಯರಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ ಸಿಎಂಗೆ ಸಲಹೆ ಕೊಡಬಹುದಾಗಿತ್ತು.
ಏನೇ ಸಲಹೆ ಕೊಟ್ರೂ ಸಿಎಂ ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದರು. ಯಾವುದೇ ಸರ್ಕಾರ ಜಾತಿಯತೆ ಮೇಲೆ ಪೋಸ್ಟಿಂಗ್ ಮಾಡಲು ಆಗಲ್ಲ. ನಾನು ಲಿಂಗಾಯತರನ್ನೇ ಹಾಕಿ ಎಂದು ಹೇಳಿಲ್ಲ. ರಾಜ್ಯ ಸರ್ಕಾರವೇ ಲಿಂಗಾಯತರನ್ನು ಹಾಕಿದ್ದಾರೆ, ನಾನೇನು ಮಾಡಲಿ ಎಂದರು.