ದಾಖಲೆಯ 15ನೇ ಬಜೆಟ್ ಮಂಡನೆಗೆ ರೆಡಿಯಾದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ದಾಖಲೆಯ 15ನೇ ಬಜೆಟ್ ಮಂಡನೆ ಮಾಡಲಿದ್ದಾರೆ.ಐದು ಗ್ಯಾರಂಟಿ ಯೋಜನೆ ಮುಂದುವರೆಸೋ ಜೊತೆಗೆ,ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕೆಲವೊಂದು ಜನಪ್ರಿಯ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಇದೆ. ಇಂದು ಬೆಳಿಗ್ಗೆ 10-15ಕ್ಕೆ ದಾಖಲೆಯ 15ನೇ ಆಯವ್ಯಯವನ್ನ ಸಿಎಂ ಸಿದ್ದರಾಮಯ್ಯ ಮಂಡನೆ ಮಾಡಲಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜನಪ್ರಿಯ ಯೋಜನೆ ಘೋಷಣೆಗಳ  ಜೊತೆಗೆ ಹಣಕಾಸಿನ ಸಮತೋಲನ ಕಾಪಾಡುವ ಜವಾಬ್ದಾರಿ ಕಾಪಾಡುವ ಸಾಧ್ಯತೆ ಇದೆ.ಐದು ಗ್ಯಾರಂಟಿ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 58 ಸಾವಿರ ಕೋಟಿ ವೆಚ್ಚವಾಗಲಿದೆ.ಹೀಗಾಗಿ, ಈ ಬಾರಿ ತುರ್ತು ಕಾಮಗಾರಿಗಳಿಗೆ  ಮಾತ್ರ ಅವಕಾಶ ನೀಡುವ ಲೆಕ್ಕಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ ಎನ್ನಲಾಗಿದೆ. ಅಂದಾಜು 3.80 ಲಕ್ಷ ಕೋಟಿ ಬೃಹತ್ ಮೊತ್ತದ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ.

Loading

Leave a Reply

Your email address will not be published. Required fields are marked *