ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಧೂಳಿಪಟ ಮಾಡಿದ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲಿದೆ. ಆದರೆ ರಾಜ್ಯದ ಮುಂದಿನ ಸಿಎಂ ಯಾರು ಎಂಬ ಕುತೂಹಲ ಎಲ್ಲರಲ್ಲಿದೆ.
ಡಿಕೆಶಿ ಹುಟ್ಟು ಹಬ್ಬದ ಹಿನ್ನೆಲೆ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಕಾಲಜ್ಞಾನಿ ಗುರೂಜಿ ಆಗಮಿಸಿ ಡಿಕೆಶಿಗೆ ಶುಭ ಹಾರೈಸಿದ್ದಾರೆ.ಸುಮಾರು ವರ್ಷಗಳಿಂದ ಅವರ ರಾಜಕೀಯ ಭವಿಷ್ಯ ಹೇಳುತ್ತಿದ್ದ ಕಾಲಜ್ಞಾನ ಗುರೂಜಿ ವಿಜಯ್ ರಾಜ್ ಡಿಕೆಶಿ ನಿವಾಸಕ್ಕೆ ಆಗಮಿಸಿದ್ದಾರೆ.
ಇಂದು ಡಿಕೆಶಿಗೆ ಬುಧ ಮತ್ತು ಆದಿತ್ಯ ಪಂಚಮಯೋಗವಿದೆ ಎಂದು ತಿಳಿಸಿ ಅವರಿಗೆ ಹಾರ ಹಾಕಿ ಆಶೀರ್ವಾದ ಮಾಡಿ ಅಲ್ಲಿಂದ ತೆರಳಿದ್ದಾರೆ. ನಿಮ್ಕ ಜಾತಕದಲ್ಲಿ ಗುರುವಾರದ ದಿನ ತುಂಬಾ ಒಳ್ಳೆಯದಿದೆ. ಅಂದೇ ಕೆಲಸ ಆರಂಭಿಸಿ ಎಂದು ಸಲಹೆ ನೀಡಿದ್ದಾರೆ. ಈ ಹಿನ್ನೆಲೆ ಗುರುವಾರದಂದು ಸಿಎಂ ಪ್ರಮಾಣ ವಚನ ಕಾರ್ಯಕ್ರಮ ಫಿಕ್ಸ್ ಆಗುತ್ತಾ..ಯಾರು ಸಿಎಂ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.