ಏಷ್ಯನ್ ಗೇಮ್ಸ್’​ನಲ್ಲಿ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ ಸಿಎಂ ಸನ್ಮಾನ

ಬೆಂಗಳೂರು: ಏಷ್ಯನ್ ಗೇಮ್ಸ್​ನಲ್ಲಿ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ ಹಾಗೂ ತರಬೇತಿದಾರರಿಗೆ ರಾಜ್ಯ ಸರ್ಕಾರ ನಗದು ಪುರಸ್ಕಾರ ನೀಡಿ ಗೌರವಿಸಿದೆ. ಪದಕ ಗೆದ್ದ ಕ್ರೀಡಾಪಟುಗಳಿಗೆ ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನ ಮಾಡಿದರು. ಏಷಿಯನ್ ಗೇಮ್ಸ್ ನಲ್ಲಿ ರಾಜ್ಯದ ಒಟ್ಟು 8 ಕ್ರೀಡಾಪಟುಗಳು ಪದಕ ಪಡೆದಿದ್ದರು. ರಾಜ್ಯದ 4 ಕ್ರೀಡಾಪಟುಗಳು ಚಿನ್ನ ಪಡೆದಿದ್ದರೆ, 4 ಕ್ರೀಡಾಪಟು ಬೆಳ್ಳಿ ಪದಕ ಪಡೆದಿದ್ದರು. ಭಾರತದ ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಒಟ್ಟು 107 ಪದಕ ಪಡೆದಿದೆ.

Loading

Leave a Reply

Your email address will not be published. Required fields are marked *