ಕೋಮು ದ್ವೇಷಕ್ಕೆ ಬಲಿಯಾದ ಕುಟುಂಬಗಳಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಪರಿಹಾರ ವಿತರಣೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅವಧಿಯಲ್ಲಿ ಗಲಭೆಯಲ್ಲಿ ಮೃತಪಟ್ಟವರಿಗೆ ಬಿಜೆಪಿಯವರು ₹25 ಲಕ್ಷ ಪರಿಹಾರ ನೀಡಿದ್ದಾರೆ. ಆದರೆ ಎಲ್ಲರಿಗೂ ಪರಿಹಾರ ನೀಡಿಲ್ಲ, ಹಿಂದುಗಳಿಗೆ ಮಾತ್ರ ನೀಡಲಾಗಿದೆ. ಪ್ರವೀಣ್ ನೆಟ್ಟಾರು, ಹರ್ಷ ಸತ್ತಾಗ 25 ಲಕ್ಷ ಪರಿಹಾರ ನೀಡಿದ್ರು. ಯಾವುದೇ ಸರ್ಕಾರವಾಗಲಿ ಎಲ್ಲರನ್ನೂ ಒಂದೇ ರೀತಿ ನೋಡಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿ ಎಲ್ಲರನ್ನೂ ಒಂದೇ ರೀತಿ ಕಾಣಬೇಕು. ಸರ್ಕಾರದ ದುಡ್ಡು ಅಂದ್ರೆ ಅದು ತೆರಿಗೆ ಹಣ, ಜನರ ದುಡ್ಡು ಎಂದರು.