ಬೆಂಗಳೂರು ;- ಬಿಬಿಎಂಪಿ ಫುಟ್ ಪಾತ್ ವ್ಯಾಪಾರಿಗಳ ತೆರವಿಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಗರದಲ್ಲಿಫುಟ್ ಪಾತ್ ವ್ಯಾಪಾರಿಗಳು ಜನರಿಗೆ ಓಡಾಡುವ ರಸ್ತೆಯನ್ನು ಆಕ್ರಮಿಸಿಕೊಂಡಿದ್ದಾರೆ.
ಹೀಗಾಗಿ ಜನರಿಗೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಅಪಘಾತಗಳು ಆಗುತ್ತಿವೆ. ನಾನೇನು ವ್ಯಾಪಾರಿಗಳ ವಿರೋಧಿ ಅಲ್ಲ. ಆದರೆ ಜನರಿಗೆ ಓಡಾಡಲು ಬಿಟ್ಟು ವ್ಯಾಪಾರ ಮಾಡಿಕೊಳ್ಳಲಿ. ಬೆಂಗಳೂರಿನ ಫುಟ್ ಪಾತ್ ಕ್ಲಿಯರ್ ಮಾಡುತ್ತಿದ್ದೇವೆ. ಬಿಬಿಎಂಪಿ ಅಧಿಕಾರಿಗಳಿಗೆ ಪಾಲಿಸಿ ಬಗ್ಗೆ ಮಾತನಾಡಬೇಡಿ ಎಂದು ಸೂಚನೆ ನೀಡಿದ್ದೇನೆ. ಪಾಲಿಸಿ ಬಿಟ್ಟು ಅಧಿಕಾರಿಗಳು ಮಾಧ್ಯಮಗಳಿಗೆ ಮಾತನಾಡಬಹುದು ಎಂದರು.