ಬೆಂಗಳೂರು: ಸಾಕಷ್ಟು ಸದ್ದು ಮಾಡಿದ್ದ ಬಿಟ್ ಕಾಯ್ನ್ ಕೇಸ್ ಗೆ ಸಂಬಂಧ ಪಟ್ಟಂತೆ ಈ ಹಗರಣ ತನಿಖೆಯನ್ನು ಸಿಐಡಿ SIT ತಂಡ ತನಿಖೆಯನ್ನು ಚುರುಕುಗೊಳಿಸಿದೆ. ಬಿಟ್ ಕಾಯ್ನ್ ಕೇಸ್ ನ ಕಿಂಗ್ ಪಿನ್ ಶ್ರೀಕಿ @ ಶ್ರೀಕೃಷ್ಣ ನ ವಿಚಾರಣೆಯನ್ನು ನಡೆಸಲಾಗುತ್ತಿದ್ದು, ಈಗಾಗಲೇ ನಾಲ್ಕು ಬಾರಿ ಶ್ರೀಕೀ @ ಶ್ರೀಕೃಷ್ಣ ನ ವಿಚಾರಣೆ ನಡೆಸಿರುವ ಸಿಐಡಿ ತಂಡ ಮತ್ತೆ ತನಿಖೆಯನ್ನು ಚುರುಕುಗೊಳಿಸಿ ವಿಚಾರಣೆ ನಡೆಸುತ್ತಿದೆ. ಕೇಸ್ ನ ಸಾಕ್ಷ್ಯಾ ನಾಶ ಸೇರಿದಂತೆ ಹಲವು ವಿಚಾರದ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಟೆಕ್ನಿಕಲ್ ವಿಚಾರಗಳ ಮಾಹಿತಿ ಕೂಡ ಲೆಹಾಕಿರುವ SIT ತಂಡ, SIT ವಿಚಾರಣೆ ವೇಳೆ ತನಿಖೆ ವೇಳೆಯ ಕೆಲ ವಿಚಾರಗಳು ಪತ್ತೆಯಾಗಿದ್ದು, ಸದ್ಯ ಶ್ರೀಕಿ ನೀಡಿರೋ ಮಾಹಿತಿ ಮೇರೆಗೆ ಎಸ್ಐಟಿ ಟೀಂ ತನಿಖೆ ಮತ್ತಷ್ಟು ಚುರುಕುಗೊಳಸಿ ತನಿಖೆ ಮುಂದುವರೆಸಲಿದ್ದಾರೆ.