ಚಿತ್ರದುರ್ಗ: ಮಿಂಚಿನ ಕಾರ್ಯಾಚರಣೆ: ಅಂತರ್ ರಾಜ್ಯ ಶ್ರೀಗಂಧ ಕಳ್ಳರ ಗ್ಯಾಂಗ್ ಅಂದರ್

ಚಿತ್ರದುರ್ಗ :- ಚಿತ್ರಹಳ್ಳಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಅಂತರ್ ರಾಜ್ಯ ಶ್ರೀಗಂಧ ಕಳ್ಳರ ಗ್ಯಾಂಗ್ ಅನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳರಿಂದ 3 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ ಮಾಡಿದ್ದಾರೆ.

ಕೊಳಾಳ್ ಬಳಿ ಇಕೋ ಕಾರಿನಲ್ಲಿದ್ದ 6 ಮಂದಿ ಅರೆಸ್ಟ್ ಮಾಡಲಾಗಿದೆ. 91 KG ಶ್ರೀಗಂಧ, 15.5 KG ರಕ್ತಚಂದನ, 25.4KG ಆನೆದಂತ, 34 .1 KG ಪೆಂಗೋಲಿನ್ ಚಿಪ್ಪು ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ್ದ 1ಲಕ್ಷ ಹಣ, 2 ಕಾರ್, 9 ಮೊಬೈಲ್ ಸೇರಿ ಮಾರಕಾಸ್ತ್ರ ವಶಕ್ಕೆ ಪಡೆಯಲಾಗಿದೆ.

A-1ಚಂದ್ರಶೇಖರ್ , A2- ಖಲೀಲ್,A-3 ಪ್ರಶಾಂತ್, A-4 ರಂಗಸ್ವಾಮಿ, A-5 ಪುನೀತ್ ನಾಯ್ಕ್, A-6 ರಾಮಾನಾಯ್ಕ್ ಬಂಧಿತರು. ಚಿತ್ರಹಳ್ಳಿ, ಶ್ರೀರಾಂಪುರ, ಐಮಂಗಲ ಸೇರಿ ವಿವಿಧ ಠಾಣೆಯಲ್ಲಿ ಈ ಗ್ಯಾಂಗ್ ಕಳ್ಳತನ ಮಾಡಿದ್ದರು.

ಈ ಸಂಬಂಧ ಖಚಿತ ಮಾಹಿತಿ ಪಡೆದು ಚಿತ್ರದುರ್ಗ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ, ಹಿರಿಯೂರು ನಗರದ ಬಬ್ಬೂರು ಬಾಡಿಗೆ ಮನೆಯಲ್ಲಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಸಿಪಿಐ ಚಿಕ್ಕಣ್ಣನವರ್ ನೇತೃತ್ವದಲ್ಲಿ ಗ್ಯಾಂಗ್ ಅರೆಸ್ಟ್ ಮಾಡಿದ್ದಾರೆ. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

 

Loading

Leave a Reply

Your email address will not be published. Required fields are marked *