ಹಿಂದೂ ಸಮಾಜ ಉಳಿಸಲು ಶ್ರೀಮಂತರ ಮಕ್ಕಳು ಬರಲ್ಲ: ಬಸನಗೌಡ ಪಾಟೀಲ್ ಯತ್ನಾಳ್

ಮೈಸೂರು: ಹಿಂದೂ ಸಮಾಜ ಉಳಿಸುತ್ತಿರುವವರು ಮೇಲ್ಜಾತಿ ಹುಡುಗರಲ್ಲ. ದಲಿತರು, ನಾಯಕರು, ಹಿಂದುಳಿದ ಸಮಾಜದ ಯುವಕರು ಉಳಿಸುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.
ತಿ. ನರಸೀಪುರದಲ್ಲಿ ಯುವ ಬ್ರಿಗೇಡ್ (Yuva Brigade) ಕಾರ್ಯಕರ್ತ ವೇಣುಗೋಪಾಲ ನಾಯಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೂಂಡಾಗಿರಿ ವಾತಾವರಣವಿದೆ. ಹಿಂದೂಗಳು ಜೀವನ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಹನುಮ ಜಯಂತಿ ಮಾಡುವುದು ಕೆಲವು ಜನರಿಗೆ ಭಯ ಹುಟ್ಟಿಸಿದೆ. ಕೇಸರಿ ಶಾಲು, ತಿಲಕ ಹಾಕಿಕೊಂಡರೆ ಹುಷಾರ್ ಅಂತ ರಾಜ್ಯದ ಮಂತ್ರಿ ಪೊಲೀಸರಿಗೆ ಹೇಳುತ್ತಾರೆ. ಇದೇನೂ ಪಾಕಿಸ್ತಾನವಾ ಎಂದು ಖಾರವಾಗಿ ಪ್ರಶ್ನಿಸಿದರು.
ಹಿಂದೂ ಸಮಾಜ ಉಳಿಸಲು ಶ್ರೀಮಂತರ ಮಕ್ಕಳು ಬರಲ್ಲ. ಹಿಂದೂ ಸಮಾಜ ಉಳಿಸುತ್ತಿರೋರು ಮೇಲ್ಜಾತಿ ಹುಡುಗರಲ್ಲ. ದಲಿತರು, ನಾಯಕರು, ಹಿಂದುಳಿದ ಸಮಾಜದ ಯುವಕರು ಉಳಿಸುತ್ತಿದ್ದಾರೆ. ಗಣಪತಿ ಕೂರಿಸಲು ಹಿಂದಿನ ಸರ್ಕಾರದ ಅವಧಿಯಲ್ಲಿ ಹಲವು ನಿರ್ಬಂಧ ಹೇರಲಾಗಿತ್ತು. ಆಗ ಸಿಎಂ ಬೊಮ್ಮಾಯಿಗೆ ಫೋನ್ ಮಾಡಿ ನೀವು ಕರ್ನಾಟಕದ ಸಿಎಂ ಹ್ಹಾ ಅಥವಾ ಲಾಹೋರ್ ಸಿಎಂ ಹ್ಹಾ ಅಂತ ಪ್ರಶ್ನಿಸಿದ್ದೆ ಎಂದು ತಿಳಿಸಿದರು.

Loading

Leave a Reply

Your email address will not be published. Required fields are marked *