ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಮೇಲೆ ಮತ್ತೊಂದು ಎಫ್ ಐಆರ್ ದಾಖಲು

ಉಡುಪಿ: ವಂಚನೆ ಪ್ರಕರಣದಲ್ಲಿ ಬಂಧಿಯಾಗಿರುವ ಆರೋಪಿ ಚೈತ್ರಾ ಕುಂದಾಪುರ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಸನಾತನ ಧರ್ಮದ ಬಟ್ಟೆ, ಬಟ್ಟಿಂಗ್ಸ್ ಮಾರಾಟ ಮಾಡಲು ಮಳಿಗೆಗೆ ಸಹಾಯ ಮಾಡುವುದಾಗಿ ವಂಚನೆ ಮಾಡಿರುವುದಾಗಿ ಪ್ರಕರಣ ದಾಖಲಿಸಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಚೈತ್ರಾ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಸುದಿನಾ ಎಂಬವರು ಈ ಪ್ರಕರಣ ದಾಖಲಿಸಿದ್ದಾರೆ. ಚೈತ್ರಾ ಕುಂದಾಪುರ 5 ಲಕ್ಷ ಹಣವನ್ನು ಪಡೆದು ವಂಚಿಸಿರುವುದಾಗಿ ದೂರು ನೀಡಿದ್ದಾರೆ.

2018ರಲ್ಲಿ 5 ಲಕ್ಷ ಹಣ ಪಡೆದು ಚೈತ್ರಾ ವಂಚಿಸಿದ್ದು, ಅಕೌಂಟ್ ಮುಖಾಂತರ 3 ಲಕ್ಷ ಹಣವನ್ನು ಸುದಿನಾ ಕಳುಹಿಸಿದ್ದಾರೆ. ಬಳಿಕ 2 ಲಕ್ಷ ನಗದು ಹಣವನ್ನೂ ಚೈತ್ರಾಳಿಗೆ ನೀಡಿದ್ದಾರೆ. ಇದಾದ ಬಳಿಕ ಚೈತ್ರಾ ಕುಂದಾಪುರ ಇತ್ತ ಅಂಗಡಿಯೂ ಇಲ್ಲ, ಅತ್ತ ಹಣವೂ ಇಲ್ಲದಂತೆ ಮಾಡಿದ್ದು, ಹಣ ವಾಪಸ್ ಕೇಳಿದರೆ ಅತ್ಯಾಚಾರ ಪ್ರಕರಣ ದಾಖಲು ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆಯಿಂದ ಚೈತ್ರಾ ವಿರುದ್ಧ ದೂರು ಕೊಡದೆ ದೂರ ಉಳಿದಿದ್ದಾಗಿ ಸುದಿನಾ ಹೇಳಿದ್ದಾರೆ.

Loading

Leave a Reply

Your email address will not be published. Required fields are marked *