ರಾಜ್ಯದಲ್ಲಿ ಕೊರೊನಾ ಸ್ಫೋಟಗೊಳ್ಳುವ ಸಾಧ್ಯತೆ: 4 ಚಿತಾಗಾರ ಮೀಸಲು

ಬೆಂಗಳೂರು: 2024ರ ಜನವರಿಯಲ್ಲಿ ಕೊರೊನಾರಾಜ್ಯದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂಬ ತಜ್ಞರ ಸಲಹೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೌದು,ದೊಡ್ಡ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದರೆ ಕಳೆದ ಬಾರಿಯಂತೆ ಚಿತಾಗಾರಗಳ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ನಾಲ್ಕು ಚಿತಾಗಾರಗಳನ್ನು ಮೀಸಲಿಡಲು ರಾಜ್ಯಸರ್ಕಾರ ಮುಂದಾಗಿದೆ.

4 ಚಿತಾಗಾರ ಮೀಸಲು

ಆಕ್ಸಿಜನ್‌ ಪ್ಲ್ಯಾಂಟ್‌ಗಳನ್ನು ನಿರ್ವಹಿಸಿ ಸುಸ್ಥಿತಿಯಲ್ಲಿಡುವುದು, ಸೋಂಕಿತರನ್ನು ಚಿಕಿತ್ಸೆಗೆ ಕರೆದೊಯ್ಯಲು ವಾರ್ಡ್ ಗೆ ಎರಡು ಅಥವಾ ಮೂರು ಆಂಬ್ಯುಲೆನ್ಸ್ ಗಳ ವ್ಯವಸ್ಥೆ ಮಾಡುವುದು, ಮೃತಪಟ್ಟರನ್ನ ಅಂತ್ಯಸಂಸ್ಕಾರದ ಸ್ಥಳಕ್ಕೆ ತೆಗೆದುಕೊಂಡು ಹೋಗಲು ವಲಯಕ್ಕೊಂದು ಆಯಂಬುಲೆನ್ಸ್.. ಜತೆಗೆ ನಗರದ ನಾಲ್ಕು ಚಿತ್ತಾಗಾರಗಳನ್ನು ಕೊರೊನಾ ಮೃತಪಟ್ಟರಿಗೆ ಮೀಸಲು ನಿರ್ಧರಿಸಲಾಗಿದೆ.

ಯಾವ್ಯಾವ ಚಿತಾಗಾರ ಮೀಸಲು

ಚಿತಾಗಾರಗಳು ಯಾವುದು ಎನ್ನುವುದು ಕೂಡಾ ನಿರ್ಧಾರವಾಗಿದ್ದು, ಬನಶಂಕರಿ ಚಿತಾಗಾರ, ಮೇಡಿಅಗ್ರಹಾರ, ಹೆಬ್ಬಾಳ, ಸುಮ್ಮನಹಳ್ಳಿ ಚಿತಾಗಾರ ಕೋವಿಡ್‌ನಿಂದ ಮೃತಪಟ್ಟವರಿಗೆ ಮೀಸಲು ಇಡಲು ನಿರ್ಧರಿಸಲಾಗಿದೆ. ಕಳೆದ ಬಾರಿ ಚಿತಾಗಾರ ಇಲ್ಲದೆ ಅಂತ್ಯಸಂಸ್ಕಾರಕ್ಕೆ ಅಲೆದಾಡಿದ ಕಾರಣಕ್ಕೆ ಈ ಬಾರಿ ಮುನ್ನೆಚ್ಚರಿಕೆ ವಹಿಸಲಾಗಿದೆ.

Loading

Leave a Reply

Your email address will not be published. Required fields are marked *