ಚಾಮರಾಜನಗರ: ವಿದ್ಯುತ್​ ತಂತಿ ತಗುಲಿ ಮೇವು ಭಸ್ಮ

ಚಾಮರಾಜನಗರ;- ಹನೂರು ತಾಲೂಕಿನ ಬೈರನಾಥ ಗ್ರಾಮದಲ್ಲಿ ವಿದ್ಯುತ್​ ತಂತಿ ತಗುಲಿ ಟ್ರ್ಯಾಕ್ಟರ್​ ನಲ್ಲಿದ್ದ ಮೇವಿಗೆ ಬೆಂಕಿ ಹತ್ತಿಕೊಂಡು ಮೇವು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಟ್ರಾಕ್ಟರ್​ನಲ್ಲಿ ಇದ್ದ ಅಪಾರ ಪ್ರಮಾಣದ ಮೇವು ಬೆಂಕಿಗೆ ಆಹುತಿ ಆಗಿದೆ. ಜಾನುವಾರುಗಳಿಗೆ ಮೇವು ಸಂಗ್ರಹಣೆಗಾಗಿ ರೈತ ಮಹದೇವಸ್ವಾಮಿ ಗ್ರಾಮಕ್ಕೆ ಸಾಗಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದು, ಬೆಂಕಿ ನಂದಿಸಿದ್ದಾರೆ. ಆ ಮೂಲಕ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

Loading

Leave a Reply

Your email address will not be published. Required fields are marked *