ಬೆಂಗಳೂರು: ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಹಾಲಶ್ರೀ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರು ಚಾಲಕನನ್ನ ವಿಚಾರಣೆ ನಡೆಸಿದರೆ ಶ್ರೀಗಳ ಸುಳಿವು ಪತ್ತೆ ಸಾಧ್ಯತೆ. ಆದ್ದರಿಂದ ಚಾಲಕನನ್ನ ಸಿಸಿಬಿ ಕಚೇರಿಗೆ ಕರೆ ತರಲಾಗುತ್ತಿದೆ. ಚೈತ್ರಾ ಕುಂದಾಪುರ ಹೇಳಿದ ಇದೇ ಮಾತು ಪ್ರಕರಣವನ್ನೇ ಬುಡಮೇಲು ಮಾಡಿದ್ದಂತಾಗಿದೆ. ತನ್ನ ಮೇಲೆ ದೂರು ಕೊಟ್ಟವರ ವಿರುದ್ಧ ಇಂದಿರಾ ಕ್ಯಾಂಟಿನ್ ಬಿಲ್ ವಿಚಾರಕ್ಕೆ ಷ್ಯಡ್ಯಂತ ಮಾಡಿದ್ದಾರೆ….
ತಲೆ ಮರೆಸಿಕೊಂಡಿರೋ ಸ್ವಾಮೀಜಿ ಸಿಕ್ಕರೆ ಎಲ್ಲಾ ಬಯಲಾಗುತ್ತೆ ದೊಡ್ಡ ದೊಡ್ಡವರ ಹೆಸರೂ ಹೊರಗೆ ಬರುತ್ತೆ ಎಂದು ಸ್ಟೇಟ್ ಮೆಂಟ್ ಕೊಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.ಇನ್ನು ದೂರುದಾರ ಚೆಫ್ ಟಾಕ್ ಸಂಸ್ಥೆಯ ಮಾಲೀಕ ಗೋವಿಂದ ಬಾಬು ಪೂಜಾರಿ ಸಿಸಿಬಿ ಕಚೇರಿ ಬಂದಿದ್ರು. ಈ ವೇಳೆ ಮಾತನಾಡಿದ ಅವರು ಇಂದಿರಾ ಕ್ಯಾಟೀನ್ ವಿಚಾರಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ನನಗೆ ವಂಚನೆ ಮಾಡಿರೋದಕ್ಕೆ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದೇನೆ ಈ ಬಗ್ಗೆ ನಾನು ದೂರು ನೀಡಿದ್ದು ದೂರಿನಲ್ಲಿ ಹೇಳಿರು ಎಲ್ಲಾ ವಿಷ್ಯಗಳು ಸತ್ಯವಾಗಿದೆ ಎಂದು ಹೇಳಿದ್ರು.