ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿ ಗೆ ಬಿಜೆಪಿ ಟಿಕೇಟ್ ಕೊಡಿಸೋದಾಗಿ ಚೈತ್ರಾ ಅಂಡ್ ಟೀಮ್ ನಡೆಸಿದ್ದ ಕೋಟಿ ಡೀಲ್ ಪ್ರಕರಣ ಸಂಬಂದ ಸಿಸಿಬಿ ಮತ್ತೊಬ್ಬ ಸ್ವಾಮಿಜೀಗೆ ನೋಟೀಸ್ ನೀಡಿದೆ.
ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ಸಿಸಿಬಿ ನೊಟೀಸ್ ನೀಡಿದೆ.
ವಜ್ರದೇಹಿ ಮಠದ ಸ್ವಾಮಿಜಿ ಚೈತ್ರ ಪ್ರಕರಣದ ಸಂಬಂಧ ಮಾಧ್ಯಗಳಲ್ಲಿ ಒಂದಷ್ಟು ಹೇಳಿಕೆ ನೀಡಿದ್ರು. ಈ ಹಿನ್ನೆಲೆ ಕೇಸ್ ಗೆ ಸಂಬಂಧಿಸಿದಂತೆ ಏನಾದರು ಸಾಕ್ಷಿ ಅಥವಾ ಮಾಹಿತಿ ಇದ್ರೆ ತನಿಖೆಗೆ ಒದಗಿಸುವಂತೆ ಸಿಆರ್ ಪಿಸಿ 91 ಅಡಿಯಲ್ಲಿ ನೊಟೀಸ್ ನೀಡಲಾಗಿದೆ.