ಬೆಂಗಳೂರು: ಚೈತ್ರ ಅಂಡ್ ಗ್ಯಾಂಗ್ 5 ಕೊಟ್ಟಿ ವಂಚನೆ ಸಂಬಂಧ ಹಾಲಾಶ್ರೀ ಸ್ವಾಮಿಜಿ ಸಿಸಿಬಿಗೆ ಲಾಕ್ ಆಗಿದ್ದೆ ರೋಚಕ ಸ್ವಾಮಿಜಿ ಅರೆಸ್ಟ್ ಹಿಂದಿದೆ ಎಸಿಪಿ ರೀನಾ ಸುವರ್ಣ ಟೆಕ್ನಿಕಲ್ ಎಫರ್ಟ್. ಸತತ ಐದು ದಿನಗಳಿಂದ ಸ್ವಾಮಿಜಿ ಹಿಂದೆ ಬಿದ್ದಿದ್ದ ಸಿಸಿಬಿ ತಂಡ.ಆದ್ರ ಮೈಸೂರಿನಿಂದ ಮಿಸ್ ಆಗಿದ್ದ ಸ್ವಾಮಿಜಿ ವೇಚ ಬದಲಿಸಿ ಮೊಬೈಲ್ ಸ್ವಿಟ್ಚ್ ಆಫ್ ಮಾಡಿ ಎಸ್ಕೇಪ್ ಆಗಿದ್ರು. ಹೈದರಬಾದ್ ಮಾಹಿತಿ ಪಡೆದು ಹೈದರಬಾದ್ ಗೂ ತೆರಳಿತ್ತು ಸಿಸಿಬಿ ಟೀಮ್. ಆದ್ರೆ ಹೈದರಾಬಾದ್ ಮಠದಿಂದ ಸ್ವಾಮಿಜಿ ಟ್ರೈನ್ ಮೂಲಕ ಕಾಶಿ ಕಡೆ ಪ್ರಯಾಣ ಮಾಡಿದ್ರು.
ಹೈದರಬಾದ್ ಮಠವೊಂದರ ಕಾರ್ ನಲ್ಲೇ ಸ್ವಾಮಿಜಿ ರತಯಲ್ವೇ ಸ್ಟೇಷನ್ ಗೆ ಡ್ರಾಪ್ ಪಡೆದುಕೊಂಡಿದ್ರು. ಮಾರ್ಗ ಮಧ್ಯ ಹೈದರಬಾದ್ ನಲ್ಲಿ ಸ್ವಾಮಿಜಿ ಹೊಸ ಮೊಬೈಲ್ ಖರೀದಿ ಮಾಡಿದ್ರ. ಸಿಸಿಬಿ ಪೊಲಿಲೀಸ್ರ ವಿಚಾರಣೆ ವೇಳೆ ಮಠದ ಕಾರು ಚಾಲಕ ಹೊಸ ಮೊಬೈಲ್ ಬಗ್ಗೆ ಮಾಹಿತಿ ನೀಡಿದ್ದ. ನಂತರ ಶುರುವಾಗಿದ್ದೆ ಅಸಲಿ ಕಹಾನಿ. ಮೊಬೈಲ್ ಐ ಎಂ ಐ ನಂಬರ್ ನಿಂದ ಸ್ವಾಮಿಜಿ ಟ್ರಾಕ್ ಮಾಡಿದ ಎಸಿಪಿ ರೀನಾ ಸುವರ್ಣ ಅಂಡ್ ಟೀಮ್.
ಸ್ವಾಮಿಜಿ ಹೊಸ ಮೊಬೈಲ್ ನಿಂದ ತಮ್ಮಮಠ ಹಾಗೂ ಹೈದರಬಾದಗ ಮಠದ ಸ್ವಾಮಿಜಿ ಸಂಪರ್ಕ ಮಾಡಿದ್ರು. ಇದಾದ ಕೆಲವೇ ಹೊತ್ತಲ್ಲಿ ಸ್ವಾಮಿಜಿಗೆ ಪೊಲೀಸ್ರು ಹೈದರಬಾದ್ ಗೆ ಬಂದಿರೋ ವಿಷಯ ಕೂಡ ತಲುಪಿತ್ತು. ಹೈದರಾಬಾದ್ ನಲ್ಲಿ ತೆಗೆದುಕೊಂಡಿದ್ದ ಮೊಬೈಲ್ ಸ್ವಿಟ್ಚ್ ಆಫ್ ಮಾಡಿ ಒಡಿಶಾದಲ್ಲಿ ಹೊಸ ಸಿಮ್ಮತ್ತು ಮೊಬೈಲ್ಖರೀದಿಮಾಡಿದ್ರು. ಆದ್ರೆ ಸ್ವಾಮಿಜಿ ರೆಗ್ಯೂಲರ್ ಆಗಿ ಫೋನ್ಮಾಡಿದ್ದ ನಂಬರ್ ಮೇಲೆ ಸಿಸಿಬಿ ಕಣ್ಣಿಟ್ಟಿತ್ತು. ಮತ್ತೆ ಅದೇ ನಂಬರ್ ಗೆ ಸ್ವಾಮಿಜಿ ಕರೆ ಮಾಡಿದಾಗ ಸಿಸಿಬಿ ಟ್ರಾಕ್ ಗೆ ಮತ್ತೆ ಸ್ವಾಮಿಜಿ ಬಂದಿದ್ರು. ಈ ಒಟ್ಟು ತನಿಖಾ ಸಮಯದಲ್ಲಿ ಮೊಬೈಲ್ ಐಎಂಇಐ ಸಿಡಿ ಆರ್ ಹಾಗೂ ಲೊಕೇಶ್ ಟ್ರೇಸ್ ಸೇರಿದಂತೆ ಎಲ್ಲಾ ಟೆಕ್ನಿಕಲ್ ಡಾಟವನ್ನ ಇದೇ ಎಸಿಪಿ ರೀನಾ ಸುವರ್ಣ ನಿರ್ವಹಿಸಿದ್ರು. ಸಿಸಿಬಿ ಕಚೇರಿಯಲ್ಲೇ ಕುಳಿತು ಈ ಎಲ್ಲಾ ಟೆಕ್ನಿಕಲ್ ಎವಿಡೆನ್ಸ್ ನ ಎಸಿಪಿ ರೀನಾ ಸುವರ್ಣ ಕಲೆಕ್ಟ್ ಮಾಡಿ ಸಿಸಿಬಿ ಸಿಬ್ಬಂದಿಗೆ ಕೊಟ್ಟಿದ್ರು . ಇದೇ ಕಾರಣಕ್ಕೆ ಸ್ವಾಮಿಜಿಯನ್ನ ಸಿಸಿಬಿ ಪೊಲೀಸ್ರು ಈಸಿಯಾಗಿ ಕ್ಯಾಚ್ ಮಾಡಲು ಸಹಕಾರಿಯಾಗಿದೆ.