`CET’ ಪರೀಕ್ಷೆ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು : ನಾಳೆಯಿಂದ ರಾಜ್ಯದ 592 ಕೇಂದ್ರಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2023 ರ ಸಿಇಟಿ ಪರೀಕ್ಷೆ ನಡೆಸಲಿದ್ದು, ಈ ಬಾರಿ 2.61 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಕೆಇಎ ನಡೆಸುವ 2023 ರ ಸಿಇಟಿ ಮೇ.

20 ರಿಂದ 22 ರವರೆಗೆ ನಡೆಯಲಿದ್ದು, ಈ ಬಾರಿ ಪರೀಕ್ಷೆಗೆ 2.61 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 1.40 ಲಕ್ಷ ಬಾಲಕಿಯರು ಮತ್ತು 1.21 ಲಕ್ಷ ಬಾಲಕರು ಹಾಗೂ 8 ಮಂದಿ ತೃತೀಯ ಲಿಂಗಿಗಳು ಸಿಇಟಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ https:kea.kar.nic.in ವಿದ್ಯಾರ್ಥಿಗಳು ವೆಬ್ ಸೈಟ್ ನೋಡಬಹುದು.

ವಿದ್ಯಾರ್ಥಿಗಳಿಗೆ ಸೂಚನೆ

1) ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಯಾವುದೇ ರೀತಿಯ ಕೈಗಡಿಯಾರವನ್ನು ಕಟ್ಟಿಕೊಂಡು ಅಥವಾ ತೆಗೆದುಕೊಂಡು ಹೋಗುವಂತಿಲ್ಲ.

2) ಕ್ಯಾಲ್ಕುಲೇಟರ್ ಅಥವಾ ಲಾಗ್ ಟೇಬಲ್ಗಳನ್ನು ಪರೀಕ್ಷಾ ಸಮಯದಲ್ಲಿ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.

3) ಹಾಗೆಯೇ ಪರೀಕ್ಷಾ ಕೊಠಡಿ ಒಳಗೆ ಯಾವುದೇ ರೀತಿಯ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳನ್ನು(ಮೊಬೈಲ್ ಪೋನ್, ಬ್ಲೂ ಟೂತ್, ಸ್ಲೈಡ್ ರೂಲ್ಸ್, ಕ್ಯಾಲ್ಕುಲೇಟರ್, ವೈಟ್ ಪ್ಲೂಯಿಡ್, ವೈಯರ್ ಲೆಸ್ ಸೆಟ್ಸ್ ಮತ್ತಿತರ) ನಿಷೇಧಿಸಲಾಗಿದೆ.

Loading

Leave a Reply

Your email address will not be published. Required fields are marked *