ಬೆಂಗಳೂರು: ಕಲಬುರಗಿ ಯುವಕರಿಗೆ ವಂಚಿಸಿ ರಷ್ಯಾ ವ್ಯಾಗನರ್ ಆರ್ಮಿ ಬಲವಂತವಾಗಿ ಸೇರಿಸುವ ವಿಚಾರವಾಗಿ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯೇ ನೀಡಿದ್ದಾರೆ. ವಿಧಾನಸೌಧಲ್ಲಿ ಮಾತನಾಡಿದ ಅವರು, ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಅಮಾಯಕರನ್ನ ಕರೆದುಕೊಂಡು ಹೋಗಿದ್ದಾರೆ. ರಷ್ಯಾ ವ್ಯಾಗ್ನರ್ ಗ್ರೂಪ್ಗೆ ಜಾಯಿನ್ ಮಾಡಿಕೊಂಡಿದ್ದಾರಂತೆ.
ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಜೊತೆ ರಾತ್ರಿ ಮಾತಾಡಿದ್ದೇನೆ. ವಿದೇಶಾಂಗ ಸಚಿವರಿಗೆ ಮಾತನಾಡಿ ಅಂತಾ ಹೇಳಿದ್ದೇನೆ. ಅವರು ಕೂಡ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಉತ್ತರ ಭಾರತದಲ್ಲಿ ಈ ರೀತಿ ಜಾಸ್ತಿ ಆಗಿದೆ. ಕೇಂದ್ರ ಸರ್ಕಾರ ಅವರನ್ನ ರಕ್ಷಣೆ ಮಾಡಬೇಕಿದೆ ಎಂದು ಒತ್ತಾಯಿಸಿದರು.
ದೇವಸ್ಥಾನ ಹುಂಡಿ ಹಣದಲ್ಲಿ ಶೇ 10ರಷ್ಟು ಸರ್ಕಾರಕ್ಕೆ ಕೊಡಬೇಕು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವುದೇ ಕಾಯ್ದೆ ಇದ್ದರೂ ವಿಧಾನಸಭೆಯಲ್ಲಿ ತೀರ್ಮಾನ ಆಗೋದು. ನಿನ್ನೆ ಯಾಕೆ ವಿರೋಧ ಮಾಡಲಿಲ್ಲ ಇವರು ಕಡ್ಲೆ ಪುರಿ ತಿನ್ನುತ್ತಿದ್ರಾ?. ಅಂಜನಾದ್ರಿ ಬೆಟ್ಟಕ್ಕೆ 100 ಕೋಟಿ ಅನುದಾನ ಕೊಡುತ್ತಿದ್ದೇವೆ. ಹನುಮ ಧ್ವಜದ ಬಗ್ಗೆ ಮಾತನಾಡುತ್ತಾರೆ. ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ರಾಮಾಯಣ ಮ್ಯೂಸಿಯಂ ಮಾಡಲು ಭೂಮಿ ಕೊಟ್ಟಿದ್ದೆ. ಬಿಜೆಪಿಯವರು ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.