ಎಲ್‌ ಪಿಜಿ ಬಳಕೆದಾರರಿಗೆ ಗುಡ್‌ ನ್ಯೂಸ್ ನೀಡಿದ ಕೇಂದ್ರ ಸರ್ಕಾರ

ದೇಶದ ಜನತೆಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, 14 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ (LPG Price Cut) 200 ರೂ ಸಬ್ಸಿಡಿ ನೀಡುವುದಾಗಿ ಘೋಷಿಸಿದೆ. ಮಂಗಳವಾರ ಕೇಂದ್ರ ಕ್ಯಾಬಿನೆಟ್‌ (Cabinet) ಸಭೆ ನಡೆಸಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

ಸಿಲಿಂಡರ್ ಸಬ್ಸಿಡಿಯಿಂದ ಕೇಂದ್ರ ಸರ್ಕಾರಕ್ಕೆ 7,500 ಕೋಟಿ ರೂಪಾಯಿ ಹೊರೆಯಾಗಲಿದೆ. ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಈ ಸಬ್ಸಿಡಿ ಅನ್ವಯವಾಗಲಿದೆ. ಸದ್ಯ 14 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆ 1,100 ರೂ ಇದೆ. ಇದರ ಬೆಲೆ ಸಾವಿರ ರೂ ಒಳಗೆ ಇರಲಿದೆ.

ತೈಲ ಕಂಪನಿಗಳಿಗೆ ನೇರವಾಗಿ ಪಾವತಿಯಾಗುವ ಕಾರಣ ಖರೀದಿಸುವಾಗಲೇ 200 ರೂ. ಕಡಿತಗೊಳ್ಳಲಿದೆ. ಪ್ರಸ್ತುತ ಬೆಂಗಳೂರಿನಲ್ಲಿ 14 ಕೆಜಿ ಎಲ್‌ಪಿಜಿಗೆ 1100 ರೂ. ಇದೆ. ಇನ್ನು ಮುಂದೆ 900 ರೂ.ಗೆ ಗ್ಯಾಸ್ ಸಿಲಿಂಡರ್‌ ಸಿಗಲಿದೆ.

ಕಚ್ಚಾ ತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ತೈಲ ಕಂಪನಿಗಳು ಮೇ, ಜುಲೈನಲ್ಲಿ ಎಲ್‌ಪಿಜಿ ಸಿಲಿಂಡರ್‌ ದರವನ್ನು ಏರಿಸಿದ್ದವು. ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂನಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಕೇಂದ್ರದಿಂದ ಈ ಮಹತ್ವದ ನಿರ್ಧಾರ ಪ್ರಕಟವಾಗಿದೆ.

ಈ ಸಬ್ಸಿಡಿ ಹಣ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌, ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೋರೇಷನ್‌ ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಕಂಪನಿಗಳಿಗೆ ಸಿಗಲಿದೆ. ನೇರವಾಗಿ ಗ್ರಾಹಕರ ಖಾತೆಗೆ ವರ್ಗಾವಣೆಯಾಗುವುದಿಲ್ಲ. ತೈಲ ಕಂಪನಿಗಳಿಗೆ ನೇರವಾಗಿ ಪಾವತಿಯಾಗುವ ಕಾರಣ ಖರೀದಿಸುವಾಗಲೇ 200 ರೂ. ಕಡಿತಗೊಳ್ಳಲಿದೆ.

Loading

Leave a Reply

Your email address will not be published. Required fields are marked *