ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದ್ದು ಇದಕ್ಕೆಲ್ಲಾ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಈ ಹಾವಳಿ ಮಾತ್ರ ನಿಂತಿಲ್ಲ.
ಸಿಸಿಬಿ ಪೊಲೀಸರಿಂದ ರೌಡಿಶೀಟರ್ ಇರ್ಫಾನ್ ನನ್ನ ಕೊಲೆ ಪ್ರಯತ್ನ ವಾರೆಂಟ್ ಅಡಿಯಲ್ಲಿ ಬಂಧಿಸಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ಇರ್ಫಾನ್.
ಸುಲಿಗೆ, ಕೊಲೆ ಪ್ರಯತ್ನ, ಬೆದರಿಕೆ ಸೇರಿ ಆರೋಪಿ ಮೇಲಿವೆ 15 ಪ್ರಕರಣಗಳಲ್ಲಿ ಭಾಗಿಯಾಗಿರುವ ಇರ್ಫಾನ್ ಕಳೆದ ಹತ್ತು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ
6 ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗದಂತೆ ತಲೆಮರೆಸಿಕೊಂಡಿದ್ದ ಇರ್ಫಾನ್ ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಿನ್ನೆಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕೊಲೆ ಪ್ರಯತ್ನ ವಾರೆಂಟ್ ಅಡಿಯಲ್ಲಿ ಇರ್ಫಾನ್ʼನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.