ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ

ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ವಿರುದ್ಧ ಬುದ್ಧ, ಬಸವಣ್ಣ ಹೋರಾಟ ಮಾಡಿದ್ದರು. ನಾವು ಮನುಷ್ಯರಾಗಿ ಬದುಕಿ ಸಮಾಜದಲ್ಲಿ ಪರಿವರ್ತನೆ ತರಬೇಕು.

ಬಸವಣ್ಣನವರು ಕೆಳವರ್ಗದ ಜನರ ಪರವಾಗಿ‌‌ ಕೆಲಸ ಮಾಡಿದ್ದರು. ಅಸಮಾನತೆ ಇದ್ದರೆ ಸಮಾಜದಲ್ಲಿ ಸಾಮರಸ್ಯ ಇರುವುದಿಲ್ಲ. ಹೀಗಾಗಿ ಬಸವಣ್ಣ ಅನುಭವ ಮಂಟಪ ನಿರ್ಮಾಣ ಮಾಡಿದರು. ಅಂಬೇಡ್ಕರ್​ ಸಂವಿಧಾನ ಬರೆಯದಿದರೆ ನಾನು ಸಿಎಂ ಆಗುತ್ತಿರಲಿಲ್ಲ. ನಾನು ಎಮ್ಮೆ ಕಾಯುತ್ತಾ ಇರುತ್ತಿದ್ದೆ. ತಂಗಡಗಿ ಕಲ್ಲು ಒಡೆಯುತ್ತಿದ್ದ ಎಂದರು.

Loading

Leave a Reply

Your email address will not be published. Required fields are marked *