200ಕ್ಕೂ ಹೆಚ್ಚು ಬ್ರಹ್ಮೋಸ್‌ ಕ್ಷಿಪಣಿ ಖರೀದಿಗೆ ಸಂಪುಟ ಸಮಿತಿ ಒಪ್ಪಿಗೆ

ನವದೆಹಲಿ: ನೌಕಪಡೆಯ ದಾಳಿ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ನೌಕಪಡೆಗಾಗಿ 19 ಸಾವಿರ ಕೋಟಿ ರೂ. ವೆಚ್ಚದಲ್ಲಿ 200ಕ್ಕೂ ಹೆಚ್ಚು ಬ್ರಹ್ಮೋಸ್‌ ಸೂಪರ್ ಸಾನಿಕ್‌ ಕ್ರೂಸ್‌ ಕ್ಷಿಪಣಿಗಳು ಹಾಗೂ ಸಂಬಂಧಿಸಿದ ಸಾಧನಗಳನ್ನು ಖರೀದಿ ಮಾಡಲು ಭದ್ರತೆ ಕುರಿತ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಭಾರತ ಮತ್ತು ರಷ್ಯಾ ಸಹಭಾಗಿತ್ವದ ಬ್ರಹ್ಮೋಸ್‌ ಏರೋಸ್ಪೇಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಈ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಗಳನ್ನು ಉತ್ಪಾದಿಸಲಿದ್ದು, ಇವುಗಳನ್ನು ಜಲಾಂತರ್ಗಾಮಿಗಳು, ಯುದ್ಧನೌಕೆಗಳು ಹಾಗೂ ಯುದ್ಧವಿಮಾನಗಳಿಂದ ಉಡಾವಣೆ ಮಾಡಬಹುದಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಖರೀದಿ ಮಾಡಲು ಮುಂದಾದ ಬ್ರಹ್ಮೋಸ್‌ ಕ್ಷಿಪಣಿಗಳು ವಿವಿಧ ವ್ಯಾಪ್ತಿಯನ್ನು ಹೊಂದಿವೆ. ಕೆಲ ಕ್ಷಿಪಣಿಗಳು 290 ಕಿ.ಮೀ. ವ್ಯಾಪ್ತಿ ವರೆಗಿನ ಗುರಿಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿದ್ದರೆ, ಇನ್ನೂ ಕೆಲವು ಕ್ಷಿಪಣಿಗಳ ಸಾಮರ್ಥ್ಯ 450 ಕಿ.ಮೀ. ವ್ಯಾಪ್ತಿಯಷ್ಟಿದೆ

Loading

Leave a Reply

Your email address will not be published. Required fields are marked *