ಚಿನ್ನ ಕೊಳ್ಳುವವರಿಗೆ ಶುಭಸುದ್ದಿ ; ಇಂದು ಕೂಡ ಚಿನ್ನದ ದರದಲ್ಲಿ ಇಳಿಕೆ

ದೆಹಲಿ ;- ಈ ವಾರವೀಡಿ ಭಾರತದಲ್ಲಿ ಚಿನ್ನದ ದರ ಇಳಿಮುಖವಾಗಿದ್ದು, ಚಿನ್ನ ಪರ್ಚೇಸ್ ಮಾಡುವವರಂತೂ ಫುಲ್ ಖುಷ್ ಆಗಿದ್ದಾರೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 54,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 59,020 ರುಪಾಯಿ ಆಗಿದೆ.

100 ಗ್ರಾಮ್ ಬೆಳ್ಳಿ ಬೆಲೆ 7,150 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 54,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,075 ರುಪಾಯಿಯಲ್ಲಿ ಇದೆ.

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

ಭಾರತದಲ್ಲಿರುವಚಿನ್ನಮತ್ತುಬೆಳ್ಳಿಬೆಲೆ :

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54,100 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,020 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 715 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್​ನ 10 ಗ್ರಾಂ ಬೆಲೆ: 54,100 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,020 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 707.50 ರೂ

ವಿವಿಧನಗರಗಳಲ್ಲಿರುವ 22 ಕ್ಯಾರಟ್ಚಿನ್ನದಬೆಲೆ (10 ಗ್ರಾಮ್ಗೆ)

ಬೆಂಗಳೂರು: 54,100 ರೂ
ಚೆನ್ನೈ: 54,450 ರೂ
ಮುಂಬೈ: 54,100 ರೂ
ದೆಹಲಿ: 54,250 ರೂ
ಕೋಲ್ಕತಾ: 54,100 ರೂ
ಕೇರಳ: 54,100 ರೂ
ಅಹ್ಮದಾಬಾದ್: 54,100 ರೂ
ಜೈಪುರ್: 54,250 ರೂ
ಲಕ್ನೋ: 54,250 ರೂ
ಭುವನೇಶ್ವರ್: 54,100 ರೂ

ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತೆ ಭರ್ಜರಿಯಾಗಿ ಇಳಿದಿದೆ. ಅಮೆರಿಕ, ಯುಎಇ, ಸಿಂಗಾಪುರ ಇತ್ಯಾದಿ ಬಹುತೇಕ ವಿದೇಶಗಳಲ್ಲಿ ಚಿನ್ನದ ಬೆಲೆ50,000 ರೂ ಒಳಗಿದೆ. ಭಾರತದಲ್ಲೂ ಚಿನ್ನದ ಬೆಲೆ ಗಮನಾರ್ಹವಾಗಿ ಇಳಿದಿದೆ.

Loading

Leave a Reply

Your email address will not be published. Required fields are marked *