ಮೈಸೂರು: ಬೆಳ್ಳಂಬೆಳಗ್ಗೆ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ ನಾಗಮಂಗಲ ಡಿಪೋ ಸಾರಿಗೆ ನೌಕರ ಜಗದೀಶ್ ಆರೋಗ್ಯ ವಿಚಾರಿಸಿದ್ದಾರೆ. ಮುಂಜಾನೆಯೇ ಬೆಂಗಳೂರಿನಿಂದ ಓಡೋಡಿ ಬಂದ ಮಾಜಿ ಸಿಎಂ ಆತ್ಮಹತ್ಯೆಗೆ ಹತ್ನಿಸಿದ್ದ ಚಾಲಕನ ಆರೋಗ್ಯ ವಿಚಾರಿಸಿದ್ದಾರೆ. ಇನ್ನೂ ಮಾಜಿ ಶಾಸಕರಾದ ಸುರೇಶ್ಗೌಡ, ರವೀಂದ್ರ ಶ್ರೀಕಂಠಯ್ಯ, ಮಾಜಿ ಮೇಯರ್ ರವಿಕುಮಾರ್ ಸೇರಿದಂತೆ ಮುಖಂಡರು ಸಾಥ್ ನೀಡಿದರು.