ಹೊಸ ವರ್ಷದ ಮೊದಲ ದಿನವೇ ಬಿಎಂಟಿಸಿಗೆ ಬಂಪರ್‌ ಆದಾಯ!

ಬೆಂಗಳೂರು: ಹೊಸ ವರ್ಷದ ಮೊದಲ ದಿನವೇ ಬಿಎಂಟಿಸಿಗೆ 4 ಕೋಟಿ 37 ಲಕ್ಷದ 70 ಸಾವಿರ ಆದಾಯ ಬಂದಿದೆ.

ವರ್ಷದ ಮೊದಲ ದಿನವಾದ ಸೋಮವಾರ ಬಿಎಂಟಿಸಿಯಲ್ಲಿ 27 ಲಕ್ಷದ 9 ಸಾವಿರದ 659 ಮಂದಿ ಪ್ರಯಾಣಿಕರು ಸಂಚರಿಸಿದ್ದಾರೆ. ಹೊಸ ವರ್ಷದ ಆಚರಣೆಯಲ್ಲಿ ಭಾಗಿಯಾಗಿದ್ದವರಿಗೆ ಬಿಎಂಟಿಸಿ ಹೆಚ್ಚುವರಿ ಬಸ್‌ ಓಡಿಸಿತ್ತು.

ನ್ಯೂ ಇಯರ್ ವೆಲ್‌ಕಮ್​ಗೆ ಬೆಂಗಳೂರಿನ ವಿವಿಧೆಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರಯಾಣಿಕರ ಅನುಕೂಲಕ್ಕೆ ಮಧ್ಯರಾತ್ರಿ 2 ಗಂಟೆವರೆಗೂ ಬಿಎಂಟಿಸಿ ಹೆಚ್ಚುವರಿ ಬಸ್‌ ಸೇವೆ ಇತ್ತು.

ನಗರದ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಇಂದಿರಾನಗರ, ಕೋರಮಂಗಲ, ಶಾಂತಿನಗರ, ಯಲಹಂಕ ಸೇರಿ ಹಲವು ನಿಲ್ದಾಣದಿಂದ ಬಸ್‌ ಸೇವೆಯನ್ನು ಬಿಎಂಟಿಸಿ ಕಲ್ಪಿಸಿತ್ತು. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳ ಸೇವೆ ನಿಯೋಜಿಸಿದ ಪರಿಣಾಮ ಬಿಎಂಟಿಸಿ ಒಂದೇ ದಿನದಲ್ಲಿ4.37 ಕೋಟಿ ರೂ.ಆದಾಯಗಳಿಸಿದೆ.

Loading

Leave a Reply

Your email address will not be published. Required fields are marked *