ಬೆಂಗಳೂರು: ಚುನಾವಣೆಗೂ ಮುನ್ನ ಪ್ರತಿದಿನ ಕರೆ ಮಾಡುತ್ತಿದ್ದ ಬಿ.ಎಸ್ ಯಡಿಯೂರಪ್ಪನವರು ಸೋತ ಮೇಲೆ ಇವತ್ತಿನವರೆಗೂ ಕರೆ ಮಾಡಿಲ್ಲ ಎಂದು ಮಾಜಿ ಸಚಿವ V. ಸೋಮಣ್ಣ ( V.Somanna) ಭಾವುಕರಾಗಿದ್ದಾರೆ.
ವರಿಷ್ಟರು ಹೇಳಿದರು ಎಂದು ನಾನು ಚಿನ್ನದಂತಹ ಕ್ಷೇತ್ರ ಬಿಟ್ಟು ಹೋದೆ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ವರಿಷ್ಟರು ಹೇಳಿದಂತೆ ನಾನು ಕೆಲಸ ಮಾಡುತ್ತೇನೆ, ವರಿಷ್ಟರ ಮಾತಿಗೆ ಬೆಲೆಕೊಟ್ಟು ನಾನು ಚಿನ್ನದಂತಹ ಕ್ಷೇತ್ರ ಬಿಟ್ಟು ಹೋದೆ ಎಂದು ಚುನಾವಣಾ ಸೋಲಿನ ಬಳಿಕ ಸೋಮಣ್ಣ ಹೇಳಿದ್ದಾರೆ.
ಚಿನ್ನದಂತಹ ಗೋವಿಂದ ರಾಜನಗರ ಕ್ಷೇತ್ರ ಬಿಟ್ಟು ಹೋಗಿದ್ದೇನೆ, ದಿನ ಬೆಳಗ್ಗೆ ಆದರೆ ಅಲ್ಲಿನ ಜನರಿಗೆ ಸಹಾಯ ಮಾಡುತ್ತಿದ್ದೆ ಎಂದು ಭಾವುಕರಾದರು. ಎಲ್ಲದಕ್ಕೂ ಕಾಲವೇ ತಕ್ಕ ಉತ್ತರ ನೀಡಲಿದೆ. ನಾನು 45 ವರ್ಷದಿಂದ ರಾಜಕೀಯದಲ್ಲಿ ಇದ್ದೀನಿ, ನನಗೆ ಯಾರೂ ಧೈರ್ಯ ತುಂಬುವ ಅಗತ್ಯ ಇಲ್ಲ ಎಂದರು.