ಹೆತ್ತತಾಯಿ ಕೊಂದು ಸೂಟ್ ಕೇಸಲ್ಲಿ ಪೊಲೀಸ್ ಠಾಣೆಗೆ ಶವ ತಂದ ಮಗಳು

ಬೆಂಗಳೂರು:ತಾಯಿಗಿಂತ ದೇವರಿಲ್ಲ.. ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂದು ತಾಯಿಯನ್ನು ಸೃಷ್ಟಿಸಿರುತ್ತಾನೆ ಎಂಬ ಮಾತಿದೆ. ತಾಯಿ ಪ್ರೀತಿಗಾಗಿ ಎಷ್ಟೋ ಜನ ಹಪಹಪಿಸುತ್ತಾರೆ. ಆದರೆ ಇಲ್ಲಿ ಒಬ್ಬ ನೀಚ ಮಗಳು ತನ್ನ ಹೆತ್ತ ತಾಯಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ಶವ ಪ್ಯಾಕ್ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾಳೆ.‌ ಈ ಕೃತ್ಯ ಕಂಡು
ಮೈಕೋ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಮಾಸ್ಟರ್ ಆಫ್ ಪಿಸಿಯೋ ಥೆರಪಿ ಮಾಡಿರುವ ಸೇನಾಲಿ ಸೇನ್ ಎಂಬ 39 ವರ್ಷದ ಮಹಿಳೆ ತನ್ನ 70 ವರ್ಷದ ತಾಯಿ ಬೀವಾ ಪಾಲ್ ನ ಕೊಲೆ ಮಾಡಿದ್ದಾಳೆ. ಇದಕ್ಕೆ ಕಾರಣ ಸೇನಾಲಿ ಅತ್ತೆ ಮತ್ತು ಅಮ್ಮನ ಜಗಳವಂತೆ. ಒಂದೇ ಮನೆಯಲ್ಲಿದ್ದ ಬೀಗರ ಜಗಳಕ್ಕೆ ಬೇಸತ್ತು ಬೀವಾ ಪೌಲ್ ತನ್ನ ಮಗಳಿಗೆ ನಿದ್ದೆ ಮಾತ್ರೆ ಹಾಕಿ ಸಾಯಿಸುವುದಾಗಿ ಹೇಳಿದ್ದಾಳೆ. ಆದರೆ ಮಗಳೇ ಅಮ್ಮನಿಗೆ ನಿನ್ನೆ ಮುಂಜಾನೆ 20 ಮಾತ್ರೆಗಳನ್ನ ನುಂಗಿಸಿದ್ದಾಳೆ.‌ ನಂತರ ಸುಮಾರು‌11 ಗಂಟೆಗೆ ತಾಯಿ ಹೊಟ್ಟೆ ನೋವು ಎಂದಾಗ ಆಸ್ಪತ್ರೆಗೆ ಸೇರಿಸಬೇಕಾದ ಮಗಳು ವೇಲ್ ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಟ್ರ್ಯಾಲಿ ಸೂಟ್ ಕೇಸ್ ನಲ್ಲಿ ತಾಯಿಯನ್ನ ಪ್ಯಾಕ್ ಮಾಡಿ ತಂದೆ ಫೋಟೋ ಜೊತೆಗೆಗಿಟ್ಟು ನೇರವಾಗಿ ಮೈಕೋ ಲೇಔಟ್ ಠಾಣೆಗೆ ಬಂದಿದ್ದಾಳೆ. ಬಿಳಕಹಳ್ಳಿಯ ಎನ್ ಎಸ್ ಆರ್ ಗ್ರೀನ್ ಅಪಾರ್ಟ್ಮೆಂಟ್ ನ ಪ್ಲಾಟ್ ನಿಂದ ಆಟೋದಲ್ಲಿ ಠಾಣೆಗೆ ಬಂದು‌ ಶವದ ಸಮೇತ ಶರಣಾಗಿದ್ದಾಳೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ‌.

Loading

Leave a Reply

Your email address will not be published. Required fields are marked *