ಚೇತನ್-ರಕ್ಷ್ ಕಾಂಬಿನೇಷನ್ ನ ’ಬರ್ಮ’ದಲ್ಲಿ ಬಾಲಿವುಡ್ ಸ್ಟಾರ್

ಚೇತನ್ ಕುಮಾರ್ ಹಾಗೂ ರಕ್ಷ್ ಜೋಡಿಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಬರ್ಮದ ಶೂಟಿಂಗ್ ಭರದಿಂದ ಸಾಗುತ್ತಿದೆ. ಟೈಟಲ್ ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಅಂಗಳದಿಂದ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದೆ. ಬರ್ಮ ಬಳಗದಲ್ಲಿ ಯಾವ ಯಾವ ತಾರೆಯರು ಇರ್ತಾರೆ? ಯಾರು ಚಿತ್ರದ ಭಾಗವಾಲಿದ್ದಾರೆ ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಿರಲಿಲ್ಲ. ಆದ್ರೀಗ ನಿರ್ದೇಶಕ ಚೇತನ್ ಕುಮಾರ್ ಬರ್ಮಗಾಗಿ ಬಾಲಿವುಡ್ ತಾರೆಯನ್ನು ಕರೆದು ತಂದಿದ್ದಾರೆ.

ಬರ್ಮ ಅಖಾಡಕ್ಕೀಗ ಬಾಲಿವುಡ್ ಸ್ಟಾರ್ ಎಂಟ್ರಿಯಾಗಿದೆ. ಹಿಂದಿ ಮಾತ್ರವಲ್ಲ ತೆಲುಗು ಸಿನಿಮಾಗಳಲ್ಲಿ ಮಿಂಚಿರುವ ಶಾವರ್ ಅಲಿ ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಆದಿತ್ಯ ನಟನೆಯ ರೆಬಲ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಶಾವರ್ ಅಲಿ, ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾದಲ್ಲಿಯೂ ವಿಲನ್ ಆಗಿ ಅಬ್ಬರಿಸಿದ್ದರು. ಇದೀಗ ಆರು ವರ್ಷದ ನಂತ್ರ ಮಗದೊಮ್ಮೆ ಕನ್ನಡ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಬಾಲಿವುಡ್ ಸಿನಿಮಾರಂಗದಿಂದ ಬಣ್ಣದ ಬದುಕು ಆರಂಭಿಸಿದ್ದ ಅವರೀಗ ಟಾಲಿವುಡ್, ಸ್ಯಾಂಡಲ್ ವುಡ್ ನಲ್ಲಿಯೂ ಮಿಂಚುತ್ತಿದ್ದು, ಚೇತನ್ ಕುಮಾರ್ ಸಾರಥ್ಯದಲ್ಲಿ ತಯಾರಾಗುತ್ತಿರುವ ಬರ್ಮ ಸಿನಿಮಾದಲ್ಲಿ ಸ್ಪೆಷಲ್ ರೋಲ್ ನಲ್ಲಿ ಶಾವರ್ ಅಲಿ ನಟಿಸುತ್ತಿದ್ದಾರೆ.

ರಕ್ಷ್ ರಾಮ್ ಆಕ್ಷನ್ ಹೀರೋ ಆಗಿ ಅಬ್ಬರಿಸಲಿರುವ ಬರ್ಮ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬರ್ಮ ತೆರೆಗೆ ಬರಲಿದೆ. ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಹಿಂದೆ ‘ಬಹದ್ದೂರ್’ ಹಾಗೂ ‘ಭರ್ಜರಿ’ ಚಿತ್ರಗಳಲ್ಲಿ ಚೇತನ್ ಕುಮಾರ್ ಹಾಗೂ ವಿ ಹರಿಕೃಷ್ಣ ಒಟ್ಟಿಗೆ ಕೆಲಸ ಮಾಡಿದ್ದರು. ಈಗ ‘ಬರ್ಮ’ ಚಿತ್ರದ ಮೂಲಕ ಮೂರನೇ ಬಾರಿಗೆ ಚೇತನ್ ಕುಮಾರ್ – ವಿ ಹರಿಕೃಷ್ಣ ಒಂದಾಗಿದ್ದಾರೆ. ಕಿರುತೆರೆ ಲೋಕದಲ್ಲಿ ಜನಪ್ರಿಯ ನಟರಾಗಿರುವ ರಕ್ಷ್ ಈಗ ‘ಬರ್ಮ’ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Loading

Leave a Reply

Your email address will not be published. Required fields are marked *