ಸಿದ್ದರಾಮಯ್ಯ ಕುರ್ಚಿ ಕಸಿಯುವ ಪ್ರಯತ್ನ ಬಿಜೆಪಿ ಖಂಡಿತ ಮಾಡಲ್ಲ: ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಹಿರಿಯ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು, ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ ಗಢ್ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಭಾರತದ ಜನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿರುವ ಕೆಲಸಗಳನ್ನು ಮೆಚ್ಚಿ ಅವರ ಮೇಲೆ ವಿಶ್ವಾಸವಿರಿಸಿರುವುದರ ಪ್ರತೀಕವಾಗಿದೆ ಎಂದು ಹೇಳಿದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂದೇಶವೊಂದನ್ನು ನೀಡಿದ ಅವರು,

ಮುಂದಿನ ನಾಲ್ಕೂವರೆ ವರ್ಷಗಳ ಅವಧಿವರೆಗೆ ಅವರೇ ಸಿಎಂ ಆಗಿ ಮುಂದುವರಿಯಲಿ, ಅವರ ಕುರ್ಚಿ ಕಸಿಯುವ ಪ್ರಯತ್ನ ಬಿಜೆಪಿ ಖಂಡಿತ ಮಾಡಲ್ಲ, ಆದರೆ ಪ್ರತಿ ವಿಧಾನ ಮಂಡಲ ಆಧಿವೇಶನ ಆರಂಭವಾದಾಗ ದೇವರಾಜ ಅರಸು ಹೆಸರನ್ನು ನೆನೆಯುವ ಅವರು ಆ ಮಹಾನುಭಾವ ದಲಿತರಿಗೆ ಮತ್ತು ಹಿಂದುಳಿದ ವರ್ಗಗಳಿಗಾಗಿ ಮಾಡಿದ ಕೆಲಸಗಳನ್ನು ಜ್ಞಾಪಕ ಮಾಡಿಕೊಳ್ಳಲಿ ಎಂದು ಹೇಳಿದರು. ರಾಜ್ಯದೆಲ್ಲೆಡೆ ಈ ವರ್ಗಗಳ ಜನರಿಗೆ ವಸತಿ ಯೋಜನೆ ಸ್ಥಗಿತಗೊಂಡಿದೆ, ಸಿದ್ದರಾಮಯ್ಯ ಯೋಜನೆ ಪುನಾರಾರಂಭಿಸಲಿ ಎಂದು ಈಶ್ವರಪ್ಪ ಹೇಳಿದರು.

Loading

Leave a Reply

Your email address will not be published. Required fields are marked *