ರಾಹುಲ್ ಗಾಂಧಿಯನ್ನು ಆಧುನಿಕ ‘ರಾವಣ’ ಪೋಸ್ಟರ್ʼನೊಂದಿಗೆ ಟ್ವೀಟ್ ಮಾಡಿದ ಬಿಜೆಪಿ!

ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ರಾವಣನಂತೆ (Ravan) ಬಿಂಬಿಸಿ, ನವಯುಗದ ರಾವಣ ಎಂದು ಬಿಜೆಪಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಈ ವಿವಾದಾತ್ಮಕ ಪೋಸ್ಟರ್ನ್ನು ಬಿಜೆಪಿ (BJP) ತನ್ನ ಎಕ್ಸ್ ಖಾತೆಯಲ್ಲಿ (ಟ್ವಿಟ್ಟರ್) ಹಂಚಿಕೊಂಡಿದೆ. ಈ ಟ್ವೀಟ್ ಈಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಪೋಸ್ಟರ್ನಲ್ಲಿ ಬಿಜೆಪಿ, ರಾವಣ, ಕಾಂಗ್ರೆಸ್ ಪಕ್ಷದ ನಿರ್ಮಾಣ, ಜಾರ್ಜ್ ಸೊರೊಸ್ ನಿರ್ದೇಶನ ಎಂದು ಬರೆದಿದೆ. ಅಲ್ಲದೇ ಚಿತ್ರದಲ್ಲಿ ರಾವಣನಂತೆಯೇ ರಾಹುಲ್ ಗಾಂಧಿಯವರಿಗೆ ಬಹು ತಲೆಗಳನ್ನು ಬಿಡಿಸಲಾಗಿದೆ. ಅಲ್ಲದೇ ರಾವಣನಂತೆ ರಕ್ಷಾಕವಚವನ್ನು ಧರಿಸಿರುವುದನ್ನು ತೋರಿಸಲಾಗಿದೆ. ಇದರ ಜೊತೆ ಹೊಸ ಯುಗದ ರಾವಣ ಬಂದಿದ್ದಾನೆ. ಅವನು ದುಷ್ಟ, ಧರ್ಮ ವಿರೋಧಿ, ರಾಮನ ವಿರೋಧಿ ಮತ್ತು ಅವನ ಗುರಿ ಭಾರತವನ್ನು ನಾಶಮಾಡುವುದು ಎಂದು ಬಿಜೆಪಿ ಬರೆದುಕೊಂಡಿದೆ.

Loading

Leave a Reply

Your email address will not be published. Required fields are marked *