ಭೋಪಾಲ್: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಅವರ ಆಪ್ತರಾಗಿದ್ದ ಸಮಂದರ್ ಪಟೇಲ್ (Samandar Patel) ಅವರು ಬಿಜೆಪಿ (BJP) ತೊರೆದು ಮತ್ತೆ ಕಾಂಗ್ರೆಸ್ (Congress) ಸೇರಿದ್ದಾರೆ. ಮಧ್ಯಪ್ರದೇಶದ (Madhya Pradesh) ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ (Kamal Nath) ಅವರ ಸಮ್ಮುಖದಲ್ಲಿ ಪಟೇಲ್ ತಮ್ಮ ಭಾರೀ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
1,200 ಕಾರುಗಳ ಬೆಂಗಾವಲಿನೊಂದಿಗೆ ಸಮಂದರ್ ಪಟೇಲ್ ತಮ್ಮ ಕ್ಷೇತ್ರವಾದ ಜವಾದ್ನಿಂದ ಭೋಪಾಲ್ಗೆ ತೆರಳಿ ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಸೇರಿದ್ದಾರೆ. 1,200ಕ್ಕೂ ಹೆಚ್ಚು ಕಾರುಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಕಚೇರಿಗೆ ತೆರಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಜೆಪಿ ಪಕ್ಷ ನನಗೆ ಉಸಿರುಗಟ್ಟಿಸಿದೆ ಎಂದು ಸಮಂದರ್ ಪಟೇಲ್ ಆರೋಪಿಸಿದ್ದಾರೆ. ಕಳೆದ 3 ತಿಂಗಳ ಅವಧಿಯಲ್ಲಿ ಕಾರ್ ರ್ಯಾಲಿಗಳ ಮೂಲಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದವರಲ್ಲಿ ಸಮಂದರ್ ಪಟೇಲ್ ಮೂರನೆಯವರು ಎಂದು ತಿಳಿದುಬಂದಿದೆ. ನೀಮುಚ್ ಪ್ರದೇಶದಲ್ಲಿ ತಮ್ಮದೇ ಆದ ಹಿಡಿತವನ್ನು ಸಾಧಿಸಿದ್ದ ಸಮಂದರ್ ಕಾಂಗ್ರೆಸ್ಗೆ ಸೇರ್ಪಡೆಯಾಗಿರುವುದರಿಂದ ಬಿಜೆಪಿಗೆ ದೊಡ್ಡ ಹಿನ್ನಡೆ ಉಂಟಾಗಿದೆ.