ಬೆಂಗಳೂರು: ಬಿಜೆಪಿ ಜೊತೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನಾಯಕರು ಕೈ ಜೊಡಿಸಿದ ನಂತರ ಬಿಜೆಪಿ ಸೇರಿದಂತೆ ಜೆಡಿಎಸ್ ನಲ್ಲಿ ಅಸಮದಾನ ವಾರ್ ಶುರುವಾಗಿದೆ. ಒಂದು ಕಡೆ ಜೆಡಿಎಸ್ ನಲ್ಲಿ ಅಸಮಧಾನದಿಂದ ಅಲ್ಪಸಂಖ್ಯಾತ ನಾಯಕರು ರಾಜೀನಾಮೆಗೆ ಮುಂದಾಗಿದ್ರೆ ಹಲವು ಮಾಜಿ ಹಾಗೂ ಹಾಲಿ ಶಾಸಕರು ಅಸಮಧಾನ ಹೊರಹಾಕ್ತಿದ್ದಾರೆ. ಇತ್ತ ಬಿಜೆಪಿಯಲ್ಲು ಹಿರಿಯ ನಾಯಕರು ಅಸಮಧಾನ ಹೊರಹಾಕ್ತಿದ್ದಾರೆ..
ಮುಂಬರುವ 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಒಂದು ಕಡೆ ಬಿಜೆಪಿ ಜೆಡಿಎಸ್ ವರಿಷ್ಠರ ಭೇಟಿಯಾಗಿ ಯಶಸ್ವಿಯಾಗಿ ಮೈತ್ರಿ ಆಗಿದೆ. ಈ ಮೈತ್ರಿಯ ಬಳಿಕ ಎರಡು ಪಕ್ಷದಲ್ಲಿ ಶ ಶುರುವಾಗ್ತಿದೆ ಕೋಲ್ಡ್ ವಾರ್.. ಎರಡೂ ಪಕ್ಷಗಳ ಒಳಗೂ ಅಸಮಾಧಾನ ದಿನೇ ದಿನೇ ಹೊರ ಬರ್ತಿದೆ. ಈಗಾಗಲೇ ಜೆಡಿಎಸ್ ನಾಯಕರು ಬಹಿರಂಗವಾಗಿಯೇ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದು, ಕೆಲ ಬಿಜೆಪಿ ನಾಯಕರು ಕೂಡ ಮೈತ್ರಿಗೆ ಅಪಸ್ವರ ಎತ್ತಿದ್ದಾರೆ. ಶಾಸಕ ಎಸ್ಟಿ ಸೋಮಶೇಖರ್ ಬಳಿಕ ಸದಾನಂದ ಗೌಡ ಮೈತ್ರಿಗೆ ಅಸಮಮಧಾನ ತೋರಿದ್ದಾರೆ. ಇದು ಬಿಜೆಪಿ ನಾಯಕ ನುಂಗಲಾರದ ತುಪ್ಪವಾಗಿದೆ.
ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಸ್ ಟಿ ಸೋಮಶೇಖರ್ ಘರ್ ವಾಪಸ್ಸಿ ಅಂದ್ರೆ ಕಾಂಗ್ರೆಸ್ ಗೆ ಹೋಗ್ತಾರೆ ಎಂಬ ಚರ್ಚೆ ಸಾಕಷ್ಟು ಕಾವೇರಿರುತ್ತಿರುವಾಗಲೇ ಮೈತ್ರಿ ಬಗ್ಗೆ ಅಸಮದಾನ ಹೊರಹಾಕಿ ನಾನು ಮುಂದಿನ ನಿರ್ಧಾರ ಕೈಗೊಳ್ಳುತ್ತೆನೆ ಅಂತ ತಮ್ಮ ನಿಲುವಿನ ಬಗ್ಗೆ ಇನ್ನು ಕುತುಹಲ ಹೆಚ್ಚುವಂತೆ ಮಾಡಿದ್ರು. ಕಾಂಗ್ರೆಸ್ ಕಡೆ ನಡೆ ಅನ್ನೋ ವಿಚಾರಕ್ಕೆ ಪುಷ್ಟಿಬಂದಿದೆ. ಇನ್ನೂ ಶಾಸಕ ಸೋಮಶೇಖರ್ ಬಳಿಕ ಮಾಜಿ ಸಿಎಂ ಹಾಗೂ ಕೇಂದ್ರ ಮಾಜಿ ಸಚಿವ ಡಿ ವಿ ಸದಾನಂದ ಕೂಡ ಮೈತ್ರಿ ವಿಚಾರವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷದ ರಾಜ್ಯ ನಾಯಕರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಬಿಜೆಪಿಯಲ್ಲಿನ ಶೇ 75ರಷ್ಟು ಜನರಿಗೆ ಈ ಮೈತ್ರಿ ಇಷ್ಟವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.ಹಾಗೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಎನ್ಡಿಎ ಮೈತ್ರಿಕೂಟವನ್ನು ಬಲಪಡಿಸಬೇಕು ನಿಜ. ಆದರೆ, ರಾಜ್ಯ ಬಿಜೆಪಿ ನಾಯಕರ ಜೊತೆ ಚರ್ಚಿಸದೆ, ಏಕಪಕ್ಷೀಯವಾಗಿ ಮೈತ್ರಿ ಮಾಡಿಕೊಂಡರೆ, ಯಾವುದೇ ರೀತಿಯ ಪ್ರಯೋಜನವಿಲ್ಲ ಅಂತಾ ನೇರವಾಗಿ ಅಸಮದಾನ ಹೊರಹಾಕಿರೋದು ರಾಜ್ಯ ಬಿಜೆಪಿಯ ನಾಯಕರಿಗೆ ಸಂಕಷ್ಟಕ್ಕೀಡುಮಾಡಿದೆ..