ನವದೆಹಲಿ: ರಾಜ್ಯದಲ್ಲಿ ಸೃಷ್ಠಿಯಾಗಿರುವ ವಿದ್ಯುತ್ ಅಭಾವಕ್ಕೆ ಬಿಜೆಪಿ ಕಾರಣ, ತಮ್ಮ ನಾಲ್ಕು ವರ್ಷದ ಅವಧಿಯಲ್ಲಿ ವಿದ್ಯುತ್ ಸಂಗ್ರಹಕ್ಕೆ ಯಾವುದೇ ಪ್ರಯತ್ನ ಮಾಡದೇ ನಿದ್ದೆ ಮಾಡಿ ಈಗ ನಮ್ಮ ಮೇಲೆ ಆರೋಪ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ (K.J George) ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಅಭಾವದಿಂದ ವಿದ್ಯುತ್ ಕೊರತೆಯಾಗಿದೆ, ಗಾಳಿಯೂ ಸರಿಯಾಗಿ ಬೀಸದೆ ವಿಂಡ್ ಎನರ್ಜಿ ಕೂಡಾ ಕಡಿಮೆಯಾಗಿದೆ. 16000 ಮೇಗಾ ವ್ಯಾಟ್ಗೆ ಬೇಡಿಕೆ ಇದೆ ಸದ್ಯ ರಾಜ್ಯದಲ್ಲಿ 1500 ಮೇಗಾ ವ್ಯಾಟ್ ಕೊರತೆಯಾಗಿದೆ ಬೇರೆ ರಾಜ್ಯಗಳ ಜೊತೆಗೆ ಮಾತಾಡಿ ವಿದ್ಯುತ್ ಖರೀದಿ ಮಾಡುತ್ತಿದೆ, ಗಿಡ್ ಯಿಂದಲೂ ವಿದ್ಯುತ್ ಖರೀದಿ ಮಾಡುತ್ತಿದೆ.
ಕೊರತೆ ನೀಗಿಸಲು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದರು.ಕೆಲ ಸರ್ಕಾರಿ ಭೂಮಿಗಳಲ್ಲಿ ಸೋಲಾರ್ ಪ್ಲಾಂಟ್ (Solar Plant) ಅಳವಡಿಸಲು ನಿರ್ಧರಿಸಿದೆ. ರೈತರಿಂದಲೂ ಭೂಮಿ ಪಡೆಯುವ ಪ್ರಯತ್ನ ನಡೆಯುತ್ತಿದೆ. ಸಕ್ಕರೆ ಕಾರ್ಖಾನೆಗಳ ಬಯೋ ಗ್ಯಾಸ್ ನಿಂದ ವಿದ್ಯುತ್ ಬರುತ್ತೆ ಅದನ್ನು ಬಳಕೆ ಮಾಡಲಿದ್ದೇವೆ. ಈ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಲಿದ್ದೇವೆ. ಕಳೆದ ನಾಲ್ಕು ವರ್ಷದಲ್ಲಿ ಏನು ಮಾಡದ ಬಿಜೆಪಿ ನಾಯಕರು ರಾಜ್ಯಕ್ಕಿದ್ದ ವಿದ್ಯುತ್ ಹಂಚಿಕೆಯನ್ನು ವಾಪಸ್ ಬಿಟ್ಟುಕೊಟ್ಟಿದೆ ನಮ್ಮ ವಿದ್ಯುತ್ ಪಾಲನ್ನು ಈಗ ಬೇರೆ ರಾಜ್ಯಗಳು ಬಳಕೆ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.