ಕನಕಪುರ: 10 ಕೆಜಿ ಅಕ್ಕಿ ಕೊಡಬೇಕೆಂದು ಬಿಜೆಪಿಗರ ಒತ್ತಾಯ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರ ದ್ವಂದ್ವ ನಿಲುವು ಗೊತ್ತಾಗುತ್ತಿದೆ. ಬಿಜೆಪಿ ನಾಯಕರ ಹೋರಾಟವನ್ನು ನಾವು ತಡೆಯುವುದಿಲ್ಲ. ನೀವು ಕೊಟ್ಟ ಭರವಸೆಗೆ ಹೋರಾಟ ಮಾಡಿ ಎಂದು ಹೇಳಿದ್ದೇವೆ. ನಮ್ಮ ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಪ್ರಚಾರ ಮಾಡುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಗದಪ್ರಹಾರ ಮಾಡುತ್ತಿದೆ. ರಾಜ್ಯದ ಎಫ್ಸಿಐ ಗೋದಾಮಿನಲ್ಲಿ ಅಕ್ಕಿ ಹುಳು ಹಿಡಿಯುತ್ತಿದೆ. ಕಾಂಗ್ರೆಸ್ಗೆ ಒಳ್ಳೆಯ ಹೆಸರು ಬರಲಿದೆ ಎಂದು ಅಕ್ಕಿ ಕೊಡುತ್ತಿಲ್ಲ. ನಾವು ದೀರ್ಘಾವಧಿಗೆ ಯೋಜನೆ ರೂಪಿಸುತ್ತಿದ್ದೇವೆ. ನಮ್ಮ ರಾಜ್ಯದಲ್ಲೂ ಭತ್ತ ಬೆಳೆಯುವರಿಗೂ ಬೆಂಬಲ ನೀಡುತ್ತೇವೆ ಎಂದರು.