ಬೆಂಗಳೂರು: ನಾನು ಮೊದಲ ಬಾರಿಗೆ ಕೊರತೆ ಬಜೆಟ್ ಮಂಡಿಸಿರುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬಜೆಟ್ನಲ್ಲಿ ತೆರಿಗೆ ಹಾಕಿದ್ದೇವೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಅಕ್ಕಿ ಕೊಡಲಿಲ್ಲ. ಬಿಜೆಪಿಯವರಿಗೆ ರಾಜಕೀಯ ಬದ್ಧತೆ ಇಲ್ಲ ಎಂದರು. ಈ ವೇಳೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ಗೆ ರಾಜಕೀಯ ಬದ್ಧತೆ ಇಲ್ಲದಿರುವುದು, ನಮಗಲ್ಲ. ಅಕ್ಕಿ ಇಲ್ಲಾಂದರೆ ಕೇಂದ್ರಕ್ಕೆ ಆರೋಪ ಮಾಡುತ್ತೀರಿ, ಹ್ಯಾಕ್ ಆಗಿದೆ ಅಂತೀರಿ. ಎಲ್ಲಕ್ಕೂ ಮೋದಿ ಕಾರಣ ಅಂತಿದೀರಿ ಅಂತ ಮುಗಿಬಿದ್ದರು. ಇದಕ್ಕೆ ಟಾಂಗ್ ಕೊಟ್ಟ ಸಿಎಂ, ನಾನು ಮೋದಿ ಹೆಸರೇ ಬಳಸಿಲ್ಲ. ನೀವು ಗಾಬರಿಯಾಗಿರಬೇಕು, ನಾನು ಮೋದಿ ಹೆಸರು ಹೇಳುತ್ತೇನೆ ಅಂತ. ಅದಕ್ಕೇ ಮುಂಚೆನೇ ಮಾತಾಡುತ್ತಿದ್ದೀರಾ ಎಂದರು.