ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ – ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿ;-ಸಚಿವ ಸಂತೋಷ್ ಲಾಡ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು ,ಅಧಿಕಾರಕ್ಕಾಗಿ ಸರ್ಕಾರ ಬೀಳಿಸುವುದು ಬಿಜೆಪಿಯವರ ಪ್ರವೃತ್ತಿ. ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.

ಕರ್ನಾಟಕದ ಅಭಿವೃದ್ಧಿ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ ಮಾತನಾಡುತ್ತಾರೆ. ಕಳೆದ 10 ವರ್ಷಗಳಲ್ಲಿ ಅವರು ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ? ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಷ್ಟು ಅಭಿವೃದ್ಧಿ ಮಾಡಿದೆ ಎಂಬುದು ಜನರಿಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ಅಧಿಕಾರಕ್ಕಾಗಿ ಮಧ್ಯ ಪ್ರದೇಶ, ಗೋವಾ ಸರ್ಕಾರವನ್ನು ಬೀಳಿಸಿದರು. ಕಳೆದ ಬಾರಿ 16 ಶಾಸಕರನ್ನು ಆಪರೇಷನ್‌ ಕಮಲ ಮಾಡಿ ನಮ್ಮ ಸರ್ಕಾರ ಬೀಳಿಸಿದರು. ಸರ್ಕಾರ ಬೀಳಿಸುವ ಪ್ರವೃತ್ತಿ ಇರುವವರು ಅಧಿಕಾರಕ್ಕೆ ಕಚ್ಚಾಡುತ್ತಾರೆ ಎಂದು ನಮಗೆ ತಿಳಿ ಹೇಳಲು ಬರುತ್ತಿದ್ದಾರೆ. ಈವರೆಗೂ ಅವರಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಆಗುತ್ತಿಲ್ಲ. ಸಿಎಂ ಕುರ್ಚಿ ಖಾಲಿ ಇಲ್ಲ ಎಂಬ ಅರಿವು ಬಿಜೆಪಿಯವರಿಗೆ ಇರಲಿ ಎಂದರು.

ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣ, ಪ್ರಧಾನಮಂತ್ರಿ ಆರೋಗ್ಯ ವಿಮಾ ಅನುಷ್ಠಾನ ಹಗರಣ ಹಾಗೂ ರಾಮ ಮಂದಿರ ಅವ್ಯವಹಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡುವುದಿಲ್ಲ. ವ್ಯಾಪಂ ಹಗರಣದಲ್ಲಿ 48 ಅಪರಾಧಿಗಳ ಹತ್ಯೆ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಒಂದೇ ಸಂಖ್ಯೆಯ ಅಡಿ 7 ಲಕ್ಷ ಜನರಿಗೆ ಆರೋಗ್ಯ ಯೋಜನೆ ತಲುಪಿಸಲಾಗಿದೆ. ₹25 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಿ ₹200 ಕೋಟಿ ವೆಚ್ಚ ಎಂದು ವರದಿಯಲ್ಲಿ ತೋರಿಸಿದ್ದಾರೆ ಎಂದು ಆರೋಪಿಸಿದರು.

Loading

Leave a Reply

Your email address will not be published. Required fields are marked *