ನವದೆಹಲಿ: ಲೋಕಸಭೆ, ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಅಂಗೀಕಾರ ಹಿನ್ನಲೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ಪೂರ್ಣ ಬಹುಮತದೊಂದಿಗೆ ಬಿಲ್ ಅಂಗೀಕಾರವಾಗಿದ್ದಕ್ಕೆ, ದೇಶದ ಎಲ್ಲ ತಾಯಂದಿಯರು, ಸೋದರಿಯರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಇಂಥಹ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳುವ ಅವಕಾಶ ಬಿಜೆಪಿಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಮಹಿಳಾ ಮೀಸಲಾತಿ ಬಿಲ್ ಬಗ್ಗೆ ಚರ್ಚೆ ನಡೆಯಲಿದ್ದು, ಮಹಿಳಾ ಮೀಸಲಾತಿ ಬಿಲ್ ಹೊಸ ಪ್ರಜಾಪ್ರಭುತ್ವದ ಬದ್ಧತೆಯ ಪ್ರತೀಕ ಎಂದು ಹೇಳಿದರು.
ಲೋಕಸಭೆಯಲ್ಲಿ ಬುಧವಾರ ಅಂಗೀಕಾರಗೊಂಡ ನಾರಿಶಕ್ತಿ ವಂದನ್ ಅಧಿನಿಯಮ್ ವಿಧೇಯಕಕ್ಕೆ ರಾಜ್ಯಸಭೆಯೂ (Rajya Sabha) ಒಪ್ಪಿಗೆ ನೀಡಿತು. 215 ಮತಗಳ ಮೂಲಕ ವಿಧೇಯಕವನ್ನು ಅವಿರೋಧವಾಗಿ ಅಂಗೀಕಾರವಾಗಿದೆ. ಈ ಮೂಲಕ ಮಂಡನೆಯಾದ ಮೊದಲ ಮಸೂದೆ ಅವಿರೋಧವಾಗಿ ಪಾಸ್ (Rajya Sabha Passed Unanimously) ಆಗುವ ಮೂಲಕ ರಾಜ್ಯಸಭೆ ದಾಖಲೆ ನಿರ್ಮಿಸಿದೆ.